ಕೂಗು ನಿಮ್ಮದು ಧ್ವನಿ ನಮ್ಮದು

ಮಂಗಳೂರಿನಲ್ಲಿ ನೀರಿನ ಸಮಸ್ಯೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ

ಮಳೆ ವಿಳಂಬದಿಂದ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಭವ ಹಿನ್ನೆಲೆ ದ.ಕನ್ನಡ ಜಿಲ್ಲೆಯ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಕೆಲವು ಕಡೆ ರಜೆ ಘೋಷಣೆ ಮಾಡಿದ್ದು ಕೆಲವು ಕಡೆ ಅರ್ಧ ದಿನ ತರಗತಿಗೆ ಸೂಚಿಸಲಾಗಿದೆ. ಕೆಲ ಕಾಲೇಜುಗಳಲ್ಲಿ ಆನ್ಲೈನ್ ತರಗತಿ ನಡೆಸ್ತಿದ್ದಾರೆ.

ಮನೆಗಳು, ಕಚೇರಿ ಜತೆಗೆ ಶೈಕ್ಷಣಿಕ ಸಂಸ್ಥೆಗಳಲ್ಲೂ ನೀರಿಗಾಗಿ ಪರದಾಟ ಹೆಚ್ಚಾಗಿದೆ. ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ನೀರಿನ ರೇಶನಿಂಗ್‌ ಶುರುವಾಗಿದ್ದು ಮಂಗಳೂರು ಉತ್ತರ, ಮಂಗಳೂರು ನಗರ ಭಾಗಕ್ಕೆ 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಮಂಗಳೂರು ಉತ್ತರ, ದಕ್ಷಿಣ ವಲಯದ ಶಾಲೆಗಳಿಗೂ ನೀರಿನ ಕೊರತೆ ಉಂಟಾಗಿದೆ. ಸದ್ಯ ಮಂಗಳೂರು ನಗರದ ಹಲವೆಡೆ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.

error: Content is protected !!