America : ಈ ಘಟನೆ ಅಮೆರಿಕಾದಲ್ಲಿ ಈ ಅಮಾನುಷ ಘಟನೆ ನಡೆದಿದೆ. ಅಪ್ತಾಪ್ತ ವಯಸ್ಸಿನ ಹುಡುಗಿಯೊಬ್ಬಳು ಅಂಗಡಿಯವರಿಗೆ ಸಿಗರೇಟು ಕೇಳಿದಾಗ ಅಲ್ಲಿಯ ಉದ್ಯೋಗಿಗಳು ಮಾರಲು ನಿರಾಕರಿಸಿಸಿಗರೇಟ್ ಕೊಡಲಿಲ್ಲ! ಅಪ್ರಾಪ್ತ ಹುಡುಗರಿಂದ ಅಂಗಡಿಯವರ ಮೇಲೆ ಹಲ್ಲೆದ್ದಾರೆ. ಆಗ ಆಕೆಯ ಸ್ನೇಹಿತರ ಗುಂಪು ಕೋಪಗೊಂಡು ಉದ್ಯೋಗಿಗಳಿಬ್ಬರ ಮೇಲೆ ಹಲ್ಲೆ ಮಾಡಿದೆ. ಹಲ್ಲೆಗೊಳಗಾದ ಇಬ್ಬರು ಉದ್ಯೋಗಿಗಳ ಮುಖದ ಮೇಲೆ ಗಾಯಗಳಾಗಿವೆಯಾದರೂ ಆಸ್ಪತ್ರೆಗೆ ಸೇರುವಂಥ ಗಂಭೀರ ಸ್ಥಿತಿ ಉಂಟಾಗಿಲ್ಲ. ಆದರೆ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಈ ಅಪ್ರಾಪ್ತರ ಗುಂಪನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.
ಅಮೆರಿಕದ 7 Eleven ಎಂಬ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಶನಿವಾರ ರಾತ್ರಿ9 ಕ್ಕೆ ಅಪ್ರಾಪ್ತೆ ಅಂಗಡಿ ಪ್ರವೇಶಿಸಿದ್ದಾಳೆ. ಅಂಗಡಿಯವರು ಆಕೆಗೆ ಸಿಗರೇಟು ಕೊಡಲು ನಿರಾಕರಿಸಿದಾಗ ಆಕೆ ಮರಳಿ ಹೋಗಿದ್ದಾಳೆ. ಆದರೆ ಕೆಲ ನಿಮಿಷಗಳ ನಂತರ ತನ್ನದೇ ವಯಸ್ಸಿನ ಹುಡುಗರೊಂದಿಗೆ ಮರುಪ್ರವೇಶಿಸಿದ್ದಾಳೆ. ನಂತರ ಈ ಗುಂಪು ಅಂಗಡಿಯ ಉದ್ಯೋಗಿಗಳ ಮೇಲೆ ಹಲ್ಲೆ ಮಾಡಿದೆ. ಈ ಸಂದರ್ಭದಲ್ಲಿ ಅಂಗಡಿಯ ಉದ್ಯೋಗಿಯೊಬ್ಬ ಮೊಬೈಲಿನಲ್ಲಿ ಈ ಘಟನೆಯನ್ನು ಚಿತ್ರೀಕರಿಸಿದ್ಧಾನೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹರಡಿದೆ. ಪೊಲೀಸರು ಅಪ್ರಾಪ್ತರ ಗುಂಪನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸಾವರ್ಜನಿಕರಿಂದಲೂ ಈ ಪ್ರಕರಣದ ಕುರಿತು ಮಾಹಿತಿ ಕೇಳಿದ್ದಾರೆ.
ಈ ಹುಡುಗರು ಗುಂಪು Dodge SUV ಕಾರಿನಲ್ಲಿ ಬಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಈತನಕ ಯಾವ ಹುಡುಗರನ್ನೂ ಪೊಲೀಸರು ಬಂಧಿಸಿಲ್ಲ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.