ಹುಬ್ಬಳ್ಳಿ: ಹುಟ್ಟು ಹಬ್ಬ ಬಂದರೆ ಸಾಕು, ಎಲ್ಲಿಲ್ಲದ ಆಡಂಬರ ಮಾಡಿಕೊಂಡು ಸಾಕಷ್ಟು ದುಡ್ಡು ಹಾಳು ಮಾಡುವ ಜನರನ್ನು ನಾವು, ನೀವು ನೋಡಿದಿವಿ. ಆದರೆ ಇಲ್ಲೊಬ್ಬ ಯುವಕ ತನ್ನ ಹುಟ್ಟು ಹಬ್ಬವನ್ನು ಭಿಕ್ಷೆ ಬೇಡಿ ಜೀವನ ಸಾಗಿಸುತ್ತುದ್ದ ವ್ಯಕ್ತಿಯ ಜೊತೆ ಆಚರಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ. ಹೌದು.. ಹೀಗೆ ಬೀದಿಯಲ್ಲಿದ್ದ ಒರ್ವ ಭಿಕ್ಷುಕ ವ್ಯಕ್ತಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿ ಬರ್ತಡೆ ಆಚರಿಸಿಕೊಂಡ ಯುವಕನ ಹೆಸರು ಗೀರಿಶ ಜಾಡರ. ಹುಬ್ಬಳ್ಳಿಯ ಅಮರಗೋಳದ ನಿವಾಸಿ. ತನ್ನ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಬೇಕೆಂಬ ಆಸೆಯಿಂದ ಹೊರಟವನ ಕಣ್ಣಿಗೆ ಬಿದ್ದದ್ದು ಈ ಭಿಕ್ಷುಕ ವ್ಯಕ್ತಿ. ಇತನ ಅವಸ್ಥೆ ನೋಡಿ ಅವನನ್ನು ಕರೆದುಕೊಂಡು ಕಟೀಂಗ್ ಮಾಡಿಸುವುದರ ಜೊತೆಗೆ, ಹೊಸ ಬಟ್ಟೆ ಹಾಗೂ ತಮ್ಮ ಜೊತೆಗೆ ಊಟ ಮಾಡಿಸಿ ಸಾಮಾನ್ಯ ಜನರಂತೆ ಭಿಕ್ಷುಕ ವ್ಯಕ್ತಿಗೆ ಹೊಸ ಲುಕ್ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗಿರೀಶ ಈ ಹಿಂದೆ ತನ್ನ ಪ್ರತಿವರ್ಷದ ಹುಟ್ಟು ಹಬ್ಬವನ್ನು ಅನಾಥ ಆಶ್ರಮ, ವೃದ್ಧಾಶ್ರಮ, ಅಂಧ ಮಕ್ಕಳ ಶಾಲೆ ಹೀಗೆ ಹೋಗಿ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಕೊರೊನಾ ಇದ್ದದ್ದರಿಂದ ಎಲ್ಲಿಯೂ ಹೋಗದೆ ಈ ಭಿಕ್ಷುಕ ವ್ಯಕ್ತಿಯ ಜೊತೆಗೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂದ್ದು ವಿಶೇಷವಾಗಿತ್ತು.ಇನ್ನೂ ಕಟಿಂಗ್ ಶಾಪ್ ಮಾಲೀಕರು ಸಹ ಇವರ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿ ಹಣ ಪಡೆಯದೆ, ಕಟಿಂಗ್ ಉಚಿತವಾಗಿ ಮಾಡಿದ್ದಾರೆ. ಈಗ ಗೀರಿಶ್ ಅವರ ಕಾರ್ಯಕ್ಕೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.