ಬೆಂಗಳೂರು: ಸಿಎಂ ಸಾಹಬ್ ಕೋ ಗುಸ್ಯಾ ಕ್ಯೋಂ ಆತಾ ಹೈ? ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮತ್ತೊಮ್ಮೆ ತಮ್ಮ ಸಿಡುಕುತನ ಪ್ರದರ್ಶಿಸಿದರು. 5 ಗ್ಯಾರಂಟಿಗಳನ್ನು ಈಡೇರಿಸಲು ಹಣಕಾಸು ಹೇಗೆ ಕ್ರೋಢೀಕರಿಸುತ್ತೀರಿ ಅಂತ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಏಕ್ ದಂ ಸಿಡುಕಿದ ಮುಖ್ಯಮಂತ್ರಿಗಳು ನೀನ್ ಕೊಡ್ತೀಯಾ ಹಣಾನಾ? ಅಂತ ಖಾರವಾಗಿ ಪ್ರಶ್ನಿಸುತ್ತಾರೆ.
ಆದರೆ ಮುಖ್ಯಮಂತ್ರಿಗಳು ತಮ್ಮ ಮಾತು ಮುಂದುವರೆಸಿ 5 ಗ್ಯಾರಂಟಿಗಳನ್ನು ಈಡೇರಿಸುವುದಯ ಮಾತ್ರ ಗ್ಯಾರಂಟಿ ಅನ್ನುತ್ತಾರೆ. ಹಣಕಾಸಿನ ವಿಷಯ ಚರ್ಚೆಯಾಗುತ್ತಿದೆ, ವಿವರಗಳನ್ನೆಲ್ಲ ಬಹಿರಂಗಪಡಿಸಲಾದು, ಶುಕ್ರವಾರ ಸಭೆಯ ನಂತರ ಎಲ್ಲ ಗೊತ್ತಾಗುತ್ತದೆ ಎಂದು ಹೇಳಿದರು.