ಕೂಗು ನಿಮ್ಮದು ಧ್ವನಿ ನಮ್ಮದು

ಹಾವಿನಿಂದ ಪವಾಡ ಸದೃಶ್ಯ ರೀತಿ ಬಾಲಕಿ ಬಚಾವ್

ಬೆಳಗಾವಿ: ಹೆಡೆ ಎತ್ತಿ ನಿತ್ತ ಹಾವಿನಿಂದ ಪವಾಡ ಸದೃಶ್ಯ ರೀತಿ ಬಾಲಕಿ ಬಚಾವ್ ಆದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ. ಸೋಮವಾರ ಸಂಜೆ ಮನೆಯ ಬಾಗಿಲಿನ ಹೊಸ್ತಿಲಿನಲ್ಲಿ ನಾಗರ ಹಾವೊಂದು ಬರುತ್ತಿತ್ತು. ಇದನ್ನು ಗಮನಿಸದೇ ಪಕ್ಕದ ಮನೆಯ ಬಾಲಕಿ ಮನೆಯೊಳಗೆ ತೆರಳುತ್ತಿದ್ದಳು.

ಬಾಲಕಿ ಹೊಸ್ತಿಲು ಬಳಿ ಬರುತ್ತಿದ್ದಂತೆ ಹಾವು ಹೆಡೆ ಎತ್ತಿದ್ದು, ಹಾವು ನೋಡಿದ ಬಾಲಕಿ ಹೆದರಿ ಮನೆಯೊಳಗೆ ಓಡಿದ್ದಾಳೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

error: Content is protected !!