ಕೂಗು ನಿಮ್ಮದು ಧ್ವನಿ ನಮ್ಮದು

ಕುಂದಾಪುರದ ಕಲರ್ಫುಲ್ ಫಿಶ್ ಮೇಘ ಶೆಟ್ಟಿ ಅತೀ ಶೀಘ್ರದಲ್ಲಿ ನೀಡಲಿದ್ದಾರೆ ಸಿಹಿಸುದ್ದಿ..!

ಜೀ ಕನ್ನಡದಲ್ಲಿ ಪ್ರಸಾರವಾದ ʼಜೊತೆ ಜೊತೆಯಲಿʼ ಸೀರಿಯಲ್ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಮೇಘಾ ಶೆಟ್ಟಿ ಮೊದಲ ಎಪಿಸೋಡ್‌ನಲ್ಲೇ ಕರುನಾಡಿನ ಮಗಳಾದರು. ಯಾರಪ್ಪಾ ಈ ಸುಂದರ ಹುಡುಗಿ ಅಂತ ಪ್ರತಿಯೊಬ್ಬರೂ ಗೂಗಲ್‌ನಲ್ಲಿ ಸರ್ಚ್ ಮಾಡಲು ಶುರುಮಾಡಿದರು. ಯಾರಿದು ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಅಂತ ಹುಡುಕಿದ್ದೆ ಹುಡುಕಿದ್ದು. ಕಡೆಗೆ ಇವರು ಕುಂದಾಪುರದ ಕಲರ್ ಫುಲ್ ಮೀನು ಅಂತ ಗೊತ್ತಾದ ಮೇಲೆ ಸಂಜೆ ಅನು ಸಿರಿಮನೆಗಾಗಿಯೇ ಟಿವಿ ಮುಂದೆ ಹಾಜರಿ ಹಾಕಿ ಕುಳಿತು ಸೀರಿಯಲ್ ನೋಡಿ ನಾನು ಮದುವೆ ಆಗೋ ಹುಡುಗಿ ನೋಡಪ್ಪ ಹಿಂಗೇ ಇರಬೇಕು ಅಂತ ಮಾತನಾಡಿಕೊಂಡಿದ್ದು ಇದೆ.

ಇಷ್ಟೆಲ್ಲಾ ಆದ ಬಳಿಕ ವೇದಿಕೆಯೊಂದರಲ್ಲಿ ನಾನು ಡಿ ಬಾಸ್ ಫ್ಯಾನ್. ದರ್ಶನ್ ಸರ್ ಅಂದ್ರೆ ನಂಗೆ ತುಂಬಾ ಇಷ್ಟ ಅಂತ ಹೇಳಿದ್ದೇ ತಡ ದರ್ಶನ್ ಫ್ಯಾನ್ ಪೇಜ್ ಅಂತೂ ಮೇಘ ಶೆಟ್ಟಿ ಹಿಂದೆ ಬಿದ್ದು ಪ್ರತಿಯೊಂದು ಹೆಜ್ಜೆಯನ್ನು ಜನತೆ ಮುಂದೆ ಇಡಲು ಪ್ರಯತ್ನಪಟ್ಟರು. ನಂತರ ಕನ್ನಡದ ಸ್ಟಾರ್ ನಟ ಗಣೇಶ್ ಹೀಗೆ ಹಲವರ ಜೊತೆ ಬಿಗ್ ಸ್ಕ್ರೀನ್ ನಲ್ಲೂ ನಟಿಸಿ ಸೈ ಅನಿಸಿಕೊಂಡ ಅನು ಸಿರಿಮನೆ ಸದ್ಯ ಬೋಲ್ಡ್ ಫೋಟೋ ಶೂಟ್ ಮಾಡಿಸಿ ಸುದ್ದಿಯಾಗಿದ್ದಾರೆ.

ಈಗ ಜನ ಕೇಳ್ತಾ ಇರೋ ಪ್ರಶ್ನೆ ಏನಪ್ಪಾ ಅಂದ್ರೆ ಮೇಘಾ ಶೆಟ್ಟಿ ಮುಂದೆ ಯಾವ ಸಿನಿಮಾ ಮಾಡ್ತಾರೆ, ಯಾವ ಸ್ಟಾರ್ ಜೊತೆ ಆಕ್ಟ್ ಮಾಡ್ತಾರೆ ಅಂತ. ಯಾಕಂದ್ರೆ ನಿಮಗೆಲ್ಲ ಗೊತ್ತಿರೋ ಹಾಗೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೊತೆಜೊತೆಯಲಿ ಸೀರಿಯಲ್ ಮುಕ್ತಾಯವಾಗಿದೆ. ಮುಂದೆ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸೋ ಅವಕಾಶ ಮೇಘ ಶೆಟ್ಟಿಗೆ ಸಿಕ್ಕಿದೆ. ಈ ನಿಟ್ಟಿನಲ್ಲಿ ಅತ್ತ ತಯಾರಿ ಕೂಡ ನಡೆಸುತ್ತಿದ್ದಾರೆ. ಅತೀ ಶೀಘ್ರದಲ್ಲಿ ಫ್ಯಾನ್ಸ್ ಗೆ ಮುಂದಿನ ಹೆಜ್ಜೆ ಏನು ಅನ್ನೋದ್ರ ಬಗ್ಗೆ ಮಾಹಿತಿ ಕೂಡ ನೀಡಲಿದ್ದಾರೆ. ಈಗ ಮೇಘ ಶೆಟ್ಟಿ ಎಲ್ಲೇ ಹೋದರೂ ಅವರನ್ನ ಜನ ಗುರುತಿಸೋದು ಅನು ಸಿರಿಮನೆ ಅಂತಲೇ.

error: Content is protected !!