ಗ್ಯಾರಂಟಿ ಯೋಜನೆ ವಿಳಂಬಕ್ಕೆ ಮಾಜಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ಚುನಾವಣೆಗೂ ಮೊದಲು ನಿನಗೂ ಫ್ರೀ, ನನಗೂ ಫ್ರೀ ಅಂದಿದ್ದರು. ಉಚಿತ, ನಿಶ್ಚಿತ, ಖಂಡಿತಾ, ಖಚಿತ ಹೀಗೆ ಹೇಳುತ್ತಿದ್ದರು. ಮೊದಲು ಯಾವುದೇ ಷರತ್ತು ಇರಲಿಲ್ಲ, ಈಗ ಷರತ್ತು ಬಂದಿದೆ, ಕಾಂಗ್ರೆಸ್ನವರು ಒಳ್ಳೆಯ ಕೆಲಸ ಮಾಡಿದ್ರೆ ಬೆಂಬಲ ಕೊಡುತ್ತೇವೆ. ಅವರು ಅರ್ಬನ್ ನಕ್ಸಲರ ಮಾತು ಕೇಳಿದರೆ ಅನುಭವಿಸುತ್ತಾರೆ.
ನಾವೂ ಕೂಡ 36% ಮತಗಳನ್ನ ಪಡೆದಿದ್ದೇವೆ. ಮಹದೇವಪ್ಪ, ಸಿದ್ದರಾಮಯ್ಯ, ಕಾಕಾ ಪಾಟೀಲ್ BPL ಕಾರ್ಡ್ನವರಾ? ಸಿದ್ದರಾಮಯ್ಯ, ಮಹದೇವಪ್ಪ ಯಾರೂ ತೆರಿಗೆ ಕಟ್ಟುವುದಿಲ್ಲವಾ? ಇಂತಹವರಿಗೆ ಫ್ರೀ ಅಂತಾ ಅವರು ಮೊದಲೇ ಹೇಳಬೇಕಿತ್ತು ಎಂದರು