ಕೂಗು ನಿಮ್ಮದು ಧ್ವನಿ ನಮ್ಮದು

ಪಠ್ಯ ಪರಿಷ್ಕರಣೆಗೆ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ರೋಶ

ಪಠ್ಯ ಪರಿಷ್ಕರಣೆಗೆ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಎಲ್ಲದರಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿ ಮತ ಬ್ಯಾಂಕ್ ಗಟ್ಟಿಮಾಡಿಕೊಳ್ಳುತ್ತದೆ. ನಾವು ಭಾರತೀಯ ಶಿಕ್ಷಣ ಬೇಕು ಅಂತಾ ಪರಿಷ್ಕರಣೆ ಮಾಡಿದ್ದೇವೆ. ಕಾಂಗ್ರೆಸ್ ಇದಕ್ಕೆ ಕೇಸರೀಕರಣ ಅಂತಾ ಹೇಳುತ್ತಿದೆ. ನಾವು ಪಠ್ಯದಲ್ಲಿ ಸೇರಿಸಿರುವ ಯಾವ ಪಾಠ ಕೇಸರೀಕರಣ ಆಗಿದೆ ಅಂತಾ ಕಾಂಗ್ರೆಸ್ನವರು ನನಗೆ ಸ್ಪಷ್ಟೀಕರಣ ಕೊಡುವ ಅವಶ್ಯಕತೆ ಇದೆ ಎಂದರು.

ವಿದ್ಯಾರ್ಥಿಗಳು ಆದರ್ಶ ಪುರುಷ ಆಗಲು ಪಠ್ಯ ಅಳವಡಿಸಿದ್ದು ಕೇಸರೀಕರಣನಾ? ಟಿಪ್ಪು ಸುಲ್ತಾನ್ ಪಾಠವನ್ನು ಒಂದಷ್ಟು ಕಡಿತ ಮಾಡಿರುವುದು ನಿಜ. ಟಿಪ್ಪು ಸುಲ್ತಾನ್ ಏನು ಮಾಡಿದ್ದಾನೆ ಅಂತಾ ಎಲ್ಲರಿಗೂ ಗೊತ್ತಿದೆ. ಶ್ರೀರಂಗಪಟ್ಟಣ ಆಂಜನೇಯ ಗದೆ ಒಡೆದು ಮಸೀದಿ ಕಟ್ಟಿದ್ದ, ಮತಾಂತರ ಆಗಿದ್ದಕ್ಕೆ ಹಿಂದೂಗಳ ಕೊಂದಿದ್ದು ಎಲ್ಲರಿಗೂ ಗೊತ್ತಿದೆ. ಅಂತಹ ಪಾಠವನ್ನು ನಮ್ಮ ಮಕ್ಕಳು ಓದಬೇಕಾ ಎಂದು ಪ್ರಶ್ನಿಸಿದರು.

error: Content is protected !!