ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ 200 ಯೂನಿಟ್ ಫ್ರೀ ವಿದ್ಯುತ್ ಕೊಡ್ತಿವಿ ಅಂತ ಗ್ಯಾರಂಟಿ ಕಾರ್ಡ್ ಹಂಚಿತ್ತು. ಇದೀಗಾ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಜನ ನಾವು ಬಿಲ್ ಕಟ್ಟಲ್ಲ ಅಂತಿದ್ದಾರೆ. ಬಿಲ್ ಕಲೆಕ್ಟ್ ಮಾಡಲು ಬೆಸ್ಕಾಂ ಮೀಟರ್ ರೀಡರ್ ಗಳು, ಗ್ರಾಹಕರ ಮನೆಗಳಿಗೆ ಹೋದಾಗ ಸಣ್ಣಪುಟ್ಟ ಗಲಾಟೆಗಳು ನಿತ್ಯ ಆಗ್ತಿವೆ. ಇದ್ರಿಂದ ಹೆದರಿದ ಮೀಟರ್ ರೀಡರ್ ಗಳು, ಫೀಲ್ಡ್ ಗೆ ಹೋಗಲ್ಲ ಅಂತಿದ್ದಾರೆ.
ಇನ್ನು ಈ ಕುರಿತಂತೆ ಆಯ ವಿಭಾಗ, ಉಪವಿಭಾಗದ ಬೆಸ್ಕಾಂ ಮೇಲಾಧಿಕಾರಿಗಳು ತಮ್ಮ ಸಿಬ್ಬಂದಿಗಳ ಜೊತೆ ಸಭೆ ನಡೆಸಿದ್ದು, ಗ್ರಾಹಕರ ಜೊತೆ ತಾಳ್ಮೆಯಿಂದ ವರ್ತಿಸಿ. ವಸ್ತುಸ್ಥಿತಿಯನ್ನ ಮನವರಿಕೆ ಮಾಡಿ ಅಂತ ಸಲಹೆ ನೀಡಿದ್ದಾರೆ. ಬೆಂಗಳೂರಿನ ಕೆಲ ಸ್ಲಂ ಗಳಲ್ಲಿ ಮೀಟರ್ ರೀಡರ್ ಗಳ ಜೊತೆ ಕಿರಿಕ್ ಗಳಾಗಿವೆ. ಸರ್ಕಾರ ಯಾವ್ದೇ ಆದೇಶ, ಸೂಚನೆ ನೀಡಿಲ್ಲ ಅಂತ ತಿಳಿಸಿ ಹೇಳಿದ್ರೂ ಜನ ತಾಳ್ಮೆ ಕಳೆದುಕೊಳ್ತಿದ್ದಾರೆ. ಹಳ್ಳಿಗಳಲ್ಲಿ ನಡೆದ ಹಲ್ಲೆಯ ಘಟನೆಗಳು ನಮ್ಮ ಮೇಲೆ ಎಲ್ಲಿ ನಡೆಯುತ್ತೋ ಅನ್ನೋ ಭಯದಲ್ಲಿಯೇ ಬೆಸ್ಕಾಂ ಸಿಬ್ಬಂದಿಗಳು ಬಿಲ್ ಕಲೆಕ್ಟ್ ಮಾಡ್ತಿದ್ದಾರೆ. ಕೆಲವರು ಬೆಸ್ಕಾಂ ಸಿಬ್ಬಂಧಿಗಳಿಗೆ ಸಹಕರಿಸಿದ್ರೆ, ಇನ್ನೂ ಕೆಲವರು ಅನಗತ್ಯವಾಗಿ ಜಗಳ ತೆಗೆಯುತ್ತಿದ್ದಾರೆ.
ಮೀಟರ್ ರೀಡರ್ಸ್ ಗಳ ಜೊತೆ ಅಧಿಕಾರಿಗಳ ಸಭೆಯಲ್ಲಿ ಏನೆಲ್ಲಾ ವಿಷಯ ಚರ್ಚೆ ಆಯ್ತು?
ಜನ ತಾಳ್ಮೆ ಕಳೆದುಕೊಂಡರೂ, ಪರಿಸ್ಥಿತಿಯನ್ನು ತಿಳಿಸಿ ಹೇಳುವಂತೆ ಬೆಸ್ಕಾಂ ಸಿಬ್ಬಂದಿಗಳಿಗೆ ಅಧಿಕಾರಿಗಳ ಸಲಹೆ
ಸರ್ಕಾರದಿಂದ ಆದೇಶ ಇನ್ನೂ ಬಂದಿಲ್ಲ ಅನ್ನೋದನ್ನ ಸಮಾಧಾನದಿಂದ ತಿಳಿಸಿ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ನಡೆದಿರುವ ಹಲ್ಲೆಯಂತಹ ಘಟನೆಗಳು, ನಗರದಲ್ಲಿ ನಡೆಯೋದಿಲ್ಲ. ಅದ್ರ ಬಗ್ಗೆ ಭಯ ಪಡಬೇಡಿ.. ಧೈರ್ಯದಿಂದ ಕೆಲಸ ಮಾಡಿ
ಕೆಲ ಸ್ಲಂ ಗಳಲ್ಲಿ ಪರಿಸ್ಥಿತಿ ಕೈ ಮೀರಿ, ಹಲ್ಲೆ ಮಾಡುವ ಸನ್ನಿವೇಶಗಳು ಎದುರಾದ್ರೆ, ಕೂಡಲೇ ಸ್ಥಳೀಯ ಪೊಲೀಸರ ಗಮನಕ್ಕೆ ತನ್ನಿ ಬಿಲ್ ಕಟ್ಟಲ್ಲ ಅಂತ ಹಠ ಮಾಡುವ ಗ್ರಾಹಕರಿಗೆ, ಆದೇಶ ಬರುವವರೆಗೂ ಬಿಲ್ ಪಾವತಿ ಮಾಡುವಂತೆ ಮನವೊಲಿಸಿ
ಫೀಲ್ಡ್ ನಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಕೂಡಲೇ ನಮ್ಮ(ಅಧಿಕಾರಿಗಳ) ಗಮನಕ್ಕೆ ತರವಂತೆ ಸೂಚನೆ ನೀಡಲಾಗಿದೆ. ಆಯಾ ವಿಭಾಗದ ಎಇ, ಎಇಇ, ಎಓಓ ತಮ್ಮ ಮೀಟರ್ ರೀಡರ್ಸ್ ಗಳಿಗೆ ಧೈರ್ಯ ತುಂಬಿದ್ದು, ನಿರಾತಂಕವಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಒಟ್ನಲ್ಲಿ ಕಾಂಗ್ರೆಸ್ ಗ್ಯಾರಂಟಿ ಎಫೆಕ್ಟ್ ನಿಂದ ಮೀಟರ್ ರೀಡರ್ ಗಳಿಗೆ ಭಯ ಶುರುವಾಗಿದ್ದು ವಿಪರ್ಯಾಸವೇ ಸರಿ.