ಕೂಗು ನಿಮ್ಮದು ಧ್ವನಿ ನಮ್ಮದು

ಇಂದಿನ ರಾಶಿ ಭವಿಷ್ಯ, ಈ ರಾಶಿಯ ನೌಕರರಿಗೆ ವೇತನವು ಆಧಿಕವಾಗಲಿದೆ

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಶೂಲ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41 ರಿಂದ 09:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ.

ಧನುಸ್ಸು: ಧಾರ್ಮಿಕ ಆಚಣೆಯಲ್ಲಿ ಆಸಕ್ತಿ ಹೆಚ್ಚಿರುವ ಸಾಧ್ಯತೆ ಇದೆ. ನೀವು ಬಂಗಾರವನ್ನು ಖರೀದಿಸುವಿರಿ. ದೂರದ ಪ್ರಯಾಣವು ನಿಮಗೆ ಸುಖವನ್ನು ಕೊಟ್ಟೀತು. ರಾತ್ರಿಯ ವೇಳೆ ಭೀತಿಯು ಅಧಿಕವಾಗಲಿದೆ‌. ಮಾನಸಿಕ ನೋವುಗಳು ನಿಮಗೆ ನಿಮ್ಮವರ ಬಗ್ಗೆ ಸಲ್ಲದ ಮಾತುಗಳನ್ನು ಕೇಳುವಿರಿ. ನಿಮಗೆ ಪ್ರೀತಿ ಜೀವನವು ಸಾಕೆನಿಸಬಹುದು. ಎಲ್ಲವನ್ನೂ ಮರೆಯಲು ಎಲ್ಲಿಗಾದರೂ ದೂರ ಹೋಗಬಹುದು. ಇತಿಹಾಸದ ಬಗ್ಗೆ ನಿಮಗೆ ಆಸಕ್ತಿ ಉಂಟಾಗಬಹುದು. ಸ್ತ್ರೀಯರು ನಿಮ್ಮನ್ನು ಅಪಮಾನ ಮಾಡಿಯಾರು. ಇದು ನಿಮಗೆ ಅತ್ಯಂತ ಕೆಟ್ಟ ಕ್ಷಣ ಎನ್ನಿಸಬಹುದು. ರಾಯರ ಸನ್ನಿಧಿಯಲ್ಲಿ ಸ್ವಲ್ಪ ಏಕಾಗ್ರವಾದ ಮನಸ್ಸಿನಿಂದ ಧ್ಯಾನಿಸಿ.

ಮಕರ: ವೇಗದ ಅಚ್ಚುಕಟ್ಟಾದ ಕೆಲಸಕ್ಕೆ ಪ್ರಶಂಸೆ ಸಿಗಬಹುದು. ವೇತನವು ಆಧಿಕವಾಗಲಿದೆ. ಮುಖ್ಯವಾದ ನಿರ್ಧಾರಗಳನ್ನು ಬಹಳ ವಿಳಂಬವಾಗಿ ತೆಗೆದುಕೊಳ್ಳುವಿರಿ. ಶ್ರೀಮಂತಕೆಯು ನಿಮಗೆ ಆದರ್ಶವಾಗಬಹುದು. ಹಣದ ಹಿಂದೆ ಬೀಳುವ ಸಾಧ್ಯತೆ ಇದೆ. ಅದು ನಿಮ್ಮನ್ನು ಮಾರ್ಗಭ್ರಷ್ಟರನ್ನಾಗಿ ಮಾಡುವುದು. ಮಕ್ಕಳ‌ ಬಗ್ಗೆ ನಿರ್ಲಕ್ಷ್ಯ ಬೇಡ. ಕಳೆದುದರ ಬಗ್ಗೆ ನಿಮಗೆ ಬೇಸರವಿರದು. ಉತ್ಸಾಹವು ನಿಮ್ಮನ್ನು ಸದಾ ಆವರಿಸಿರುವುದು. ಮಾನಸಿಕ ಅಸಮತೋಲನವು ನಿಮ್ಮ ಏಕಾಗ್ರತೆಯನ್ನು ಭಂಗ ಮಾಡೀತು. ಹತ್ತು ಬಾರಿ ಹನುಮಾನ್ ಚಾಲಿಸ್ ಪಠಣ‌ ಮಾಡಿ.

ಕುಂಭ: ಇಂದು ನೀವು ಅಧಿಕ ಶ್ರಮವನ್ನು ಹಾಕಲು ಪ್ರಯೋಜನವನ್ನು ನೋಡಬಹುದು. ಊಹಿಸಿದಂತೆ ಆಗಿದ್ದು ನಿಮಗೆ ಸಂತೋಷವಾಗಲಿದೆ. ಕಲಿಕೆಯಲ್ಲಿ ಹೊಸತನವನ್ನು ತಂದುಕೊಳ್ಳಲು ನೀವು ತಯಾರಾಗಿರುವಿರಿ. ದೈವದ ಬಗ್ಗೆ ಆಸಕ್ತಿ ಕಡಿಮೆ ಆಗಬಹುದು. ಸಂತಾನದ ಶುಭ ಸಮಾಚಾರವು ನಿಮಗೆ ಖುಷಿ ಕೊಡುವುದು. ಬೇರೆಯರಿಂದ ಅವಮಾನಿತರಾಗಬಹು. ಕೆಲಸಗಳು ಮಂದಗತಿಯಲ್ಲಿ ಸಾಗಲಿದೆ. ನಿಮ್ಮ ನಿರಂತರವಾದ ಕೆಲಸವು ಇಂದು ಫಲವನ್ನು ಕೊಡಬಹುದು. ಮಾತಿನಲ್ಲಿ ಸಿಕ್ಕಿಕೊಳ್ಳಬಹುದು. ಪ್ರಸಿದ್ಧ ಶಿವಕ್ಷೇತ್ರದಲ್ಲಿ ರುದ್ರಾಭಿಷೇಕವನ್ನು ಮಾಡಿಸಿ.

ಮೀನ: ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಬರುವ ಸಾಧ್ಯತೆ ಇದೆ.‌ ವಿದ್ಯಾರ್ಥಿಗಳಲ್ಲಿ ಸ್ವಲ್ಪಮಟ್ಟಿನ ಗಾಂಭೀರ್ಯತೆ ಬರಬಹುದು. ತಾಯಿಯಿಂದ ಅಥವಾ ತಾಯಿಯ ಬಂಧುಗಳಿಂದ ಧನ‌ ಮುಂತಾದ ಸಹಾಯವು ಸಿಗಬಹುದು. ಇಂದು ನಿಮಗೆ ಸೌಂದರ್ಯಪ್ರಜ್ಞೆಯ ಬಗ್ಗೆ ಆಸಕ್ತಿ ಇರವುದು. ಅನನುಕೂಲತೆಯನ್ನು ಸವಾಲಾಗಿ ಸ್ವೀಕರಿಸುವಿರಿ. ದುರಭ್ಯಾಸವನ್ನು ಗೊತ್ತಿಲ್ಲದೇ ಬೆಳೆಸಿಕೊಳ್ಳುವಿರಿ. ಅತಿಯಾದ ಬಾಯಾರಿಕೆಯಾಗಲಿದೆ. ಉದರಕ್ಕೆ ಸಂಬಂಧಿಸಿದ ರೋಗವು ಕಾಣಸಿಕೊಂಡೀತು.‌ ಸ್ಪರ್ಧೆಯಲ್ಲಿ ಸೋಲಾಗಬಹುದು.‌ ಇದರಿಂದ‌ ಕುಗ್ಗುವುದು ಬೇಡ. ಮೃತ್ಯುಂಜಯನ ಸ್ತೋತ್ರವನ್ನು ಮಾಡಿ.

error: Content is protected !!