ಬೆಂಗಳೂರು: ವಿಧಾನಸೌಧದಲ್ಲಿ ಕೇಸರಿ, ಹಸಿರು, ತುಳು, ತ್ರಿವರ್ಣದ ಶಾಲುಗಳ ಸಮಾಗಮ. ಎತ್ತಿನ ಗಾಡಿಯಲ್ಲೇ ಶಕ್ತಿಸೌಧಕ್ಕೆ ಬಂದ ಶಾಸಕರು. ಯೆಸ್.. ರಾಜ್ಯದಲ್ಲಿ ಚುನಾವಣಾ ಸುಗ್ಗಿ ಮುಗಿದು ಈಗ ಹೊಸ ಫಸಲು ಬಂದಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನ ಫುಲ್ ಕಲರ್ಫುಲ್ ಆಗಿದ್ದು, ನೂತನ ಶಾಸಕರು ಹೊಸ ಹುರುಪಿನಿಂದಲೇ ಸದನದಲ್ಲಿ ಭಾಗಿಯಾಗಿದ್ರು.
ಶಾಸಕರ ಫೋಟೋ ಶೂಟ್ಗೆ ಸಖತ್ ಪೋಸ್ ಕೊಟ್ಟು ಎಂಜಾಯ್ ಮಾಡಿದ್ರು. ಅದರಲ್ಲೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರದ್ದೇ ಫುಲ್ ಹವಾ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.