ಕೂಗು ನಿಮ್ಮದು ಧ್ವನಿ ನಮ್ಮದು

ಹಿಟ್ಲರ್ ಕಲ್ಯಾಣ ಧಾರಾವಾಹಿ ಮುಗಿಯುತ್ತಾ? ಬರ್ತಿದೆ ಅಮೃತಧಾರೆ ಸೀರಿಯಲ್!

ಜೀ ಕನ್ನಡದಲ್ಲಿ ಮುಂದಿನ ವಾರದಿಂದ ಸಂಜೆ 7 ಗಂಟೆಗೆ ಅಮೃತಧಾರೆ ಹೊಸ ಸೀರಿಯಲ್ ಪ್ರಸಾರವಾಗಲಿದೆ. ಹಾಗಾದ್ರೆ ಹಿಟ್ಲರ್ ಕಲ್ಯಾಣ ಧಾರಾವಾಹಿ ಮುಕ್ತಾಯವಾಗುತ್ತಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಹಿಟ್ಲರ್ ಕಲ್ಯಾಣ, ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಹಿಟ್ಲರ್ ಕಲ್ಯಾಣ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಧಾರಾವಾಹಿಯಲ್ಲಿ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗುತ್ತಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ.

ಎಜೆಗೆ ಲೀಲಾ ಮೇಲೆ ಪ್ರೀತಿ ಹುಟ್ಟುತ್ತೆ. ಅದನ್ನು ಹೇಳಿಕೊಂಡಿದ್ದರು ಸಹ. ಇನ್ನೇನು ಇಬ್ಬರು ಜೊತೆಯಾಗಿ ಸಂಸಾರ ಮಾಡಬೇಕು ಎನ್ನುವಷ್ಟರಲ್ಲಿ ಅಂತರ ಎಂಟ್ರಿ ಆಗುತ್ತೆ
ಅಂತರ ಎಜೆ ಅವರ ಮೊದಲ ಹೆಂಡ್ತಿ. ಇಷ್ಟು ದಿನ ಅಂತರ ಸತ್ತಿದ್ದಾಳೆ ಎಂದು ಎಲ್ಲರು ಅಂದುಕೊಂಡಿದ್ರು. ಆದ್ರೆ ಅಂತರ ಮತ್ತೆ ಬರುತ್ತಾಳೆ. ಎಜೆ ಲೀಲಾ ಬಿಟ್ಟು ಅಂತರ ಕಡೆ ಗಮನ ಕೊಡುತ್ತಿದ್ದಾರೆ. ಹಿಟ್ಲರ್ ಕಲ್ಯಾಣ ಧಾರಾವಾಹಿ ಜನರಿಗೆ ಇಷ್ಟ ಆಗಿತ್ತು. ಆದ್ರೆ ಮೇ 29, ಸೋಮವಾರದಿಂದ ಸಂಜೆ 7 ಕ್ಕೆ ಅಮೃತಧಾರೆ ಸೀರಿಯಲ್ ಪ್ರಸಾರವಾಗಲಿದೆ. ಅದಕ್ಕೆ ಹಿಟ್ಲರ್ ಕಲ್ಯಾಣ ಧಾರಾವಾಹಿ ಮುಕ್ತಾಯವಾಗುತ್ತಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ. ಇಲ್ಲ ಟೈಮಿಂಗ್ಸ್ ಚೇಂಜ್ ಆಗುತ್ತಾ ಎಂತಿದ್ದಾರೆ.

ಅಮೃತಧಾರೆ ಧಾರಾವಾಹಿಯಲ್ಲಿ ನಟಿಯಾಗಿ ಛಾಯಾಸಿಂಗ್ ಕಾಣಿಸಿಕೊಂಡಿದ್ದಾರೆ. ನಟರಾಗಿ ರಾಜೇಶ್ ನಟರಂಗ ಕಾಣಿಸಿಕೊಂಡಿದ್ದಾರೆ. ಚಾನೆಲ್ ಪ್ರೊಮೋವೊಂದನ್ನು ಬಿಟ್ಟಿದೆ. ಪ್ರೊಮೋ ಎಲ್ಲರಿಗೂ ಇಷ್ಟ ಆಗಿದೆ. ಅಮೃತಧಾರೆ ಸೀರಿಯಲ್ ನಲ್ಲಿ ನಾಯಕ-ನಾಯಕಿ ಸದಾ ಕಿತ್ತಾಡ್ತಾ ಇರ್ತಾರೆ ಎಂದು ತೋರಿಸಲಾಗಿದೆ. ಆದ್ರೆ ಕಿತ್ತಾಡೋ ಇವರ ಹಿಂದೆ ನೋವಿನ ಕಥೆ ಇದೆ ಎಂದು ಹೇಳಲಾಗ್ತಿದೆ. ಮನೆಯವರಿಗಾಗಿ ಏನು ಬೇಕಾದ್ರೂ ಮಾಡೋಕೆ ರೆಡಿ ಇರೋ ಇವರು, ಜೀವನದಲ್ಲಿ ಒಂಟಿಯಾಗಿದ್ದಾರೆ. ಇವರು ಜೋಡಿ ಆಗಿ ಜೀವನ ನಡೆಸುತ್ತಾರಾ ನೋಡಬೇಕು.

error: Content is protected !!