30 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಸೋಮವಾರ ಬೆಳಗ್ಗೆ ಉತ್ತರ ಪ್ರದೇಶದ ಬಲ್ಲಿಯಾದ ಫೆಫಾನಾ ಪ್ರದೇಶದ ಮಾಲ್ದೇಪುರ್ ಘಾಟ್ ಬಳಿ ಗಂಗಾ ನದಿಯಲ್ಲಿ ಮುಳುಗಿ ಮೂವರು ಸಾವಿಗೀಡಾಗಿದ್ದಾರೆ. ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಇತರ ಮೂವರನ್ನು ರಕ್ಷಿಸಲಾಗಿದೆ. ಅವರನ್ನು ಗಂಭೀರ ಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಲ್ಲಿಯಾದ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ), ರವೀಂದ್ರ ಕುಮಾರ್ ಹೇಳಿದ್ದಾರೆ. ಬೋಟ್ ಅಡಿಯಲ್ಲಿ ಯಾವುದೇ ವ್ಯಕ್ತಿ ಸಿಲುಕಿಲ್ಲ ಅಥವಾ ಉಳಿದಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ದೋಣಿ ನಡೆಸುವವರು ಪರಾರಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಸ್ಥಳೀಯ ಸಂಪ್ರದಾಯದಂತೆ ಮಲ್ದೇಪುರ ಘಾಟ್ನಲ್ಲಿ ಮುಂಡನ ಸಂಸ್ಕಾರಕ್ಕಾಗಿ ಜನರು ಇಲ್ಲಿಗೆ ಬರುತ್ತಾರೆ.
ಮುಂಡನ ನಂತರ ಅವರು ದೋಣಿಯಲ್ಲಿ ನದಿಯನ್ನು ದಾಟಿ ಹಿಂತಿರುಗುತ್ತಾರೆ. ಸಂಪ್ರದಾಯದಂತೆ ದೋಣಿಯಲ್ಲಿ 30 ಮಂದಿ ನದಿ ದಾಟುತ್ತಿದ್ದರು. ಬೋಟ್ ಇಂಜಿನ್ ಕೆಲವು ತಾಂತ್ರಿಕ ತೊಂದರೆಗೀಡಾಗಿಇದ್ದಕ್ಕಿದ್ದಂತೆ ದೋಣಿ ಮಗುಚಿತು ಎಂದು ಅವರು ಹೇಳಿದ್ದಾರೆ.