ಚಿಕ್ಕಬಳ್ಳಾಪುರ ಒಂದು ಪಕ್ಷಕ್ಕೆ ಮೀಸಲಾಗಿದೆ ಎನ್ನುವುದಕ್ಕಿಂತ ಒಬ್ಬ ವ್ಯಕ್ತಿಯ ಭದ್ರಕೋಟೆಯಾಗಿದೆ ಎನ್ನಬಹುದು. ಹೌದು.. 2013ರ ಚುನಾವಣೆಗೆ ಎಂಟ್ರಿ ಕೊಟ್ಟ ಡಾ. ಕೆ. ಸುಧಾಕರ್ ಅವರು ಇಂದು ಹಾಲಿ ಶಾಸಕರಾಗಿದ್ದಾರೆ. ಅಲ್ಲದೆ, ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರು ಸಹ ಆಗಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸುಧಾಕರ್ ಅವರು ನಂತರ ಬಿಜೆಪಿ ಸೇರ್ಪಡೆಯಾಗುವ ಮೂಲಕ 2019ರಲ್ಲಿ ಉಪಚುನಾವಣೆ ಎದುರಿಸಿ ಗೆದ್ದರು. 2023ರ ಚುನಾವಣಾ ಅಖಾಡದಲ್ಲಿರುವ ಸುಧಾಕರ್ ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ 3 ಕಡೆ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಚಿಕ್ಕಬಳ್ಳಾಪುರ ಕಾಂಗ್ರೆಸ್- ಲೀಡ್ 9 ನೇ 7084, ಶಿಡ್ಲಘಟ್ಟ ಜೆಡಿಎಸ್-ಲೀಡ್ 2042, ಬಾಗೇಪಲ್ಲಿ ಕಾಂಗ್ರೆಸ ಲೀಡ್ 9 ನೇ 7084 ಕಮಲ 2018 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಪಕ್ಷಾಂತರವಾದ ಶಾಸಕರಲ್ಲಿ ಡಾ. ಸುಧಾಕರ್ ಕೂಡ ಒಬ್ಬರು. 2013 ರಿಂದ ಇಲ್ಲಿನವರೆಗೂ ಗೆಲ್ಲುತ್ತಾ ಬಂದಿದ್ದಾರೆ. ಒಂದು ರೀತಿ ಚಿಕ್ಕಬಳ್ಳಾಪುರ ಸುಧಾಕರ್ ಭದ್ರಕೋಟೆಯಾಗಿದೆ. ಕಳೆದ ಚುನಾವಣೆಯಲ್ಲಿ ಸುಧಾಕರ್ ಅವರು 82006 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ನ ಕೆ. ಪಿ. ಬಚ್ಚೇಗೌಡರು ವಿರುದ್ಧ ಗೆದ್ದಿದ್ದರು. 2018 ಗೆದ್ದು ಪಕ್ಷಾಂತರಗೊಂಡು ನಂತರ 2019ರಲ್ಲಿ ಉಪಚುನಾವಣೆ ಎದುರಿಸಿ ಗೆಲುವಿ ಸಿಂಹಾಸನ ಏರಿದ್ದರು.
98729 ಪುರುಷರು, 99049 ಮಹಿಳೆಯರು, 25 ಇರತೆ ಸೇರಿದಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 197803 ಮತದಾರಿದ್ದಾರೆ. ಜೆಡಿಎಸ್ನಿಂದ ಕೆ. ಪಿ. ಬಚ್ಚೇಗೌಡರು 2023 ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಂಗ್ರೆಸ್ ಸಹ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಅವರನ್ನು ಕಣಕ್ಕಿಳಿಸಿದೆ. ಸತತ ಎರಡು ಬಾರಿ ಗೆಲುವು ಕಂಡಿರುವ ಸುಧಾಕರ್ಗೆ ಈ ಬಾರಿಯ ಚುನಾವಣೆ ಅದೃಷ್ಟ ತರುತ್ತೋ ಅಥವಾ ಸೋಲನ್ನು ಪರಿಚಯಿಸುತ್ತದೆಯೋ ಅಂತ ಕಾಯ್ದು ನೋಡ ಬೇಕಿದೆ.
2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು
ಬಿಜೆಪಿ – ಡಾ. ಕೆ ಸುಧಾಕರ್
ಕಾಂಗ್ರೆಸ್ – ಪ್ರದೀಪ್ ಈಶ್ವರ್
ಬಿಎಸ್ಪಿ – ಪಿಲ್ಲಾ ಆಂಜಿನಪ್ಪ
ಜಿಡಿಎಸ್ – ಕೆ. ಪಿ. ಬಾಚೇ ಗೌಡ
ಎಎಪಿ – ಡಾ. ಎಂ. ಎಂ. ಭಾಷಾ ನಂದಿ
2) ಗೌರಿಬಿದನೂರು ವಿಧಾನಸಭಾ ಕ್ಷೇತ್ರ
ಎನ್.ಎಚ್. ಶಿವಶಂಕರ್ ರೆಡ್ಡಿಯವರು ಪ್ರಸ್ತುತ ಗೌರಿಬಿದನೂರು ಶಾಸಕರಾಗಿದ್ದಾರೆ. 2018ರ ಚುನಾವಣೆಯಲ್ಲಿ 69000 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿ.ಆರ್ ನರಸಿಂಹಮೂರ್ತಿ ವಿರುದ್ಧ ಗೆದ್ದಿದ್ದರು. ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕೆ. ಜೈಪಾಲ್ ರೆಡ್ಡಿ 34759 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಜಿದ್ದಾಜಿದ್ದಿ ಇದೆ.
2023ರ ಚುನಾವಣ ಕಣದಲ್ಲಿ ಹಾಲಿ ಶಾಸಕ ಎನ್. ಎಚ್. ಶಿವಶಂಕರ್ ವಿರುದ್ಧ ಜೆಡಿಎಸ್ ಮತ್ತೆ ಸಿ. ಆರ್. ನರಸಿಂಹ ಮೂರ್ತಿಯವರನ್ನು ಚುನಾವಣಾ ಕಣಕ್ಕಿಳಿಸಿದೆ. ಅಲ್ಲದೆ, ಬಿಜೆಪಿ ಈ ಬಾರಿ ಡಾ. ಎಚ್. ಎಸ್. ಶಶಿಧರ ಕುಮಾರ್ ಅವರಿಗೆ ಟಿಕೆಟ್ ನೀಡಿದೆ. ಒಟ್ಟು 203048 ಮತದಾರರಿರುವ ಕ್ಷೇತ್ರದಲ್ಲಿ 101236 ಮಂದಿ ಪುರುಷರು ಹಾಗೂ 101810 ಮಂದಿ ಮಹಿಳಾ ಮತದಾರರಾಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಗೌರಿಬಿದನೂರಿನಲ್ಲಿ ಯಾವ ಪಕ್ಷದ ಬಾವುಟ ಹಾರಲಿದೆ ಎನ್ನವುದನ್ನ ಕಾಯ್ದು ನೋಡಬೇಕಿದೆ.
2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಲಿಸ್ಟ್
ಜೆಡಿಎಸ್ – ಸಿ. ಆರ್. ನರಸಿಂಹ ಮೂರ್ತಿ (ಝಡ್ಪಿ)
ಬಿಎಸ್ಪಿ – ಪ್ರಕಾಶ್ ಬಾಬು ಕೆ.
ಬಿಜೆಪಿ – ಡಾ. ಎಚ್. ಎಸ್. ಶಶಿಧರ ಕುಮಾರ್
ಕಾಂಗ್ರೆಸ್ – ಎನ್. ಎಚ್. ಶಿವಶಂಕರ ರೆಡ್ಡಿ
ಎಎಪಿ – ಸೈಯದ್ ನಾಸಿರ್ ಅಲಿ
3) ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ
2018ರಲ್ಲಿ 76240 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ವಿ ಮುನಿಯಪ್ಪ ಅವರು ಜಯಗಳಿಸಿದ್ದರು. ಜೆಡಿಸ್ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಅಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿಎನ್ ರವಿಕುಮಾರ್ ಅವರು 66531 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಬಿಜೆಪಿ ಅಭ್ಯರ್ಥಿ ಸುರೇಶ್ ಹೆಚ್ 3596 ಪಡೆದಿದ್ದರು.
2013, 2018 ರಲ್ಲಿ ಸತತವಾಗಿ ಗೆಲುವು ಸಾಧಿಸಿರುವ ಕಾಂಗ್ರೆಸ್ನ ವಿ. ಮುನಿಯಪ್ಪ ಅವರ ವಿರುದ್ಧ 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಮತ್ತೇ ಬಿ.ಎನ್. ರವಿಕುಮಾರ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಪಕ್ಷದಿಂದ ಸೀಕಲ್ ರಾಮಚಂದ್ರಗೌಡ ಅವರು ಸ್ಪರ್ಧೆಗಿಳಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಕ್ಷೇತ್ರದಲ್ಲಿ 198200 ಮತದಾರಿದ್ದು, 99829 ಪುರುಷ ಮತ್ತು 98361 ಮಂದಿ ಮಹಿಳಾ ಮತದಾರರಾಗಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಈ ಬಾರಿ ಮತದಾರ ಯಾರಿಕೆ ಜೈಕಾರ ಹಾಕ್ತಾನೆ ಅಂತ ಕಾಯ್ದು ನೋಡಬೇಕಿದೆ.
2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಲಿಸ್ಟ್
ಎಎಪಿ- ಬಿ. ಎಸ್. ಮೌಲಾಜಾನ್
ಜಿಡಿಎಸ್ – ಬಿ. ಎನ್. ರವಿ ಕುಮಾರ್
ಕಾಂಗ್ರೆಸ್ – ಬಿ. ವಿ. ರಾಜೀವ್ ಗೌಡ
ಬಿಜೆಪಿ – ಸೀಕಲ್ ರಾಮಚಂದ್ರ ಗೌಡ
ಬಿಎಸ್ಪಿ – ಮಲ್ಲೂರು ವೆಂಕಟರಮಣಪ್ಪ
6) ಚಿಂತಾಮಣಿ ವಿಧಾನಸಭಾ ಕ್ಷೇತ್ರ
ಕಳೆದ 2018 ವಿಧಾನಸಭಾ ಚುನಾವಣೆಯಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಜೆ.ಕೆ. ಕೃಷ್ಣಾರೆಡ್ಡಿಯವರು ಗೆಲುವು ಸಾಧಿಸಿದ್ದರು. ಕೃಷ್ಣಾರೆಡ್ಡಿಯವರು 87753 ಮತಗಳನ್ನು ಪಡೆಯುವ ಮೂಲಕ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದ ಡಾ. ಎಂ.ಸಿ.ಸುಧಾಕರ್ ವಿರುದ್ಧ 5673 ಮಗಳ ಅಂತರದಲ್ಲಿ ಜಯ ಗಳಿಸಿದ್ದರು. 2023ರ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಚಿಂತಾಮಣಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ.
214446 ಮತದಾರರಿರುವ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 107098 ಮಂದಿ ಪುರುಷರು ಹಾಗು 107305 ಮಂದಿ ಮಹಿಳಾ ಮತದಾರರಾಗಿದ್ದಾರೆ. ಇನ್ನು ಈ ಬಾರಿ ಜೆಡಿಎಸ್ ಜಿ.ಕೆ. ಕೃಷ್ಣಾರೆಡ್ಡಿಯವರನ್ನು ಸೋಲಿಸಲು ಬಿಜೆಪಿ ಜಿ.ಎನ್ ವೇಣುಗೋಪಾಲ್ ಮತ್ತು ಕಾಂಗ್ರೆಸ್ ಡಾ. ಎಂ.ಸಿ. ಸುಧಾಕರ್ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಪಕ್ಷೇತರರಾಗಿ ನಿಂತು ಸ್ಪರ್ಧಿಸಿ ಸೋತಿದ್ದ ಡಾ. ಎಂ.ಸಿ. ಸುಧಾಕರ್ ಕಾಂಗ್ರೆಸ್ ಪಕ್ಷ ಮರಳಿ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ
ಜೆಡಿಎಸ್ – ಜೆ. ಕೆ. ಕೃಷ್ಣಾ ರೆಡ್ಡಿ
ಬಿಎಸ್ಪಿ – ಪಿ. ವಿ. ನಾಗಪ್ಪ
ಎಎಪಿ – ಸಿ. ಬೈರೆಡ್ಡಿ
ಬಿಜೆಪಿ – ಜಿ. ಎನ್. ವೇಣುಗೋಪಾಲ್ (ಗೋಪಿ)
ಕಾಂಗ್ರೆಸ್ – ಡಾ. ಎಂ. ಸಿ. ಸುಧಾಕರ್
5) ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ
ಪ್ರಸ್ತುತ ಕಾಂಗ್ರೆಸ್ನ ಎಸ್. ಎನ್ ಸುಬ್ಬಾರೆಡ್ಡಿ ಅವರು ಶಾಸಕರಾಗಿದ್ದಾರೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಅವರು, 65710 ಮತಗಳನ್ನು ಪಡೆದು ಜಯಗಳಿಸಿದ್ದರು. ಸಿಪಿಎಂ ಪಕ್ಷದ ಅಭ್ಯರ್ಥಿ ಜಿ. ವಿ ಶ್ರೀರಾಮರೆಡ್ಡಿ 14,013 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು. 38302 ಮತಗಳನ್ನು ಪಡೆದುಕೊಳ್ಳುವ ಮೂಲಕ ಡಾ. ಸಿ.ಆರ್ ಮನೋಹರ್ ಮೂರನೇ ಸ್ಥಾನ ಗಿಟ್ಟಿಸಿಕೊಂಡರು.
ಇನ್ನು ಈ ಬಾರಿಯ ಚುನಾವಣಾ ಕಣದಲ್ಲಿ ಎಸ್. ಎನ್. ಸುಬ್ಬಾರೆಡ್ಡಿಯವರನ್ನು ಕಾಂಗ್ರೆಸ್ ಮತ್ತೆ ಕಣಕ್ಕಿಳಿಸಿದೆ. ಸಿಪಿಎಂ ಪಕ್ಷದಿಂದ ಡಾ. ಎ. ಅನಿಲ್ ಕುಮಾರ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿ ಸಿ. ಮುನಿರಾಜು, ಎಎಪಿ ಪಕ್ಷದದಿಂದ ಡಾ. ಮಧು ಸೀತಪ್ಪ, ಬಿಎಸ್ಪಿ ಪಕ್ಷದಿಂದ ಟಿ. ಮುನಿಸ್ವಾಮಿ ಚುನಾವಣಾ ಅಖಾಡದಲ್ಲಿದ್ದಾರೆ. 197238 ಮತದಾರರಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ, 98197 ಪುರುಷರು ಹಾಗೂ 99017 ಮಹಿಳಾ ಮತದಾರರಾಗಿದ್ದಾರೆ.
2023ರ ವಿಧಾನಸಭಾ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು
ಸಿಪಿಎಂ – ಡಾ. ಎ. ಅನಿಲ್ ಕುಮಾರ್
ಎಎಪಿ- ಡಾ. ಮಧು ಸೀತಪ್ಪ
ಬಿಜೆಪಿ – ಸಿ. ಮುನಿರಾಜು
ಬಿಎಸ್ಪಿ – ಟಿ. ಮುನಿಸ್ವಾಮಿ (ಸಾಯಿ)
ಕಾಂಗ್ರೆಸ್ – ಎಸ್. ಎನ್. ಸುಬ್ಬಾರೆಡ್ಡಿ (ಚಿನ್ನಕಾಯಲಪಲ್ಲಿ)