ಅಂದಹಾಗೆ, ತಮ್ಮ ಕ್ಷೇತ್ರದಲ್ಲಿ ಖಾದರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಬ್ಯರ್ಥಿಗಿಂತ ಮುಂದಿದ್ದಾರೆ.
ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಈಗಾಗಲೇ ಮೂರು ಬಾರಿ ಗೆದ್ದು ನಾಲ್ಕನೇ ಬಾರಿ ಆಯ್ಕೆ ಬಯಸಿರುವ ಯುಟಿ ಖಾದರ್ ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ ಮಾರಾಯ್ರೇ.
ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಅತಂಕದಿಂದ ಟಿವಿ ಮುಂದೆ ಕೂತಿದ್ದರೆ, ಖಾದರ್ ಮಾತ್ರ ನಿರಾತಂಕ ಭಾವದಿಂದ ಉಳ್ಳಾಲದ ಭಾರತ್ ಮೈದಾನದಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಡಿಕೊಂಡಿದ್ದಾರೆ. ಅಂದಹಾಗೆ, ತಮ್ಮ ಕ್ಷೇತ್ರದಲ್ಲಿ ಖಾದರ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಬ್ಯರ್ಥಿಗಿಂತ ಮುಂದಿದ್ದಾರೆ.