ಬೆಂಗಳೂರು: ಎಕ್ಸಿಟ್ಪೋಲ್ ಮೇಲೆ ನಂಬಿಕೆ ಇಲ್ಲ, ನನ್ನ ನಂಬಿಕೆ 141 ಸ್ಥಾನ, ಎಕ್ಸಿಟ್ಪೋಲ್ ನಮ್ಮ ಬಗ್ಗೆ ವಿಶ್ವಾಸ ತೋರಿಸಿದ್ದಕ್ಕೆ ಅಭಿನಂದನೆ. ಕಾಂಗ್ರೆಸ್ಗೆ ಬಹುಮತ ಬರುತ್ತದೆ, ಇದು ನನ್ನ ಅಚಲ ನಂಬಿಕೆ. ಚುನಾವಣೆ ವೇಳೆ ಬಿಜೆಪಿಯವರು ಎಷ್ಟೇ ಹಣ ಸುರಿದಿರಬಹುದು.
ಬಿಜೆಪಿಯ ಎಷ್ಟೇ ನಾಯಕರು ಬಂದು ಪ್ರಚಾರ ಮಾಡಿರಬಹುದು. ಕಾಂಗ್ರೆಸ್ಗೆ ಬಹುಮತ ಬರುತ್ತದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.