ಕೂಗು ನಿಮ್ಮದು ಧ್ವನಿ ನಮ್ಮದು

ತಿರುಪತಿಗೆ ತೆರಳಿದ ಸಚಿವ ಜೋಶಿ

ಹುಬ್ಬಳ್ಳಿ : ವಿಧಾನಸಭೆ ಚುನಾವಣೆ ಮತದಾನದ ನಂತರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ್ದಾರೆ. ಬುಧವಾರ ರಾತ್ರಿ ರೈಲಿನ ಮೂಲಕ ಪ್ರಲ್ಹಾದ ಜೋಶಿ ಕುಟುಂಬ ತಿರುಪತಿಗೆ ತೆರಳಿದೆ. ಗುರುವಾರ ಇಡೀ ದಿನ ತಿರುಪತಿಯಲ್ಲಿ ಕುಟುಂಬದವರ ಜತೆಗೆ ಕಾಲ ಕಳೆದ ಜೋಶಿ, ಮೊಮ್ಮಗಳ ಜತೆಗೆ ಆಟವಾಡಿದ್ದಾರೆ. ಶುಕ್ರವಾರ ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲಿದ್ದಾರೆ.

ಕಳೆದ ಸುಮಾರು ಒಂದು ತಿಂಗಳಿಂದ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಲ್ಹಾದ ಜೋಶಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಶುಕ್ರವಾರ ರಾತ್ರಿ ತಿರುಪತಿಯಿಂದ ಹೊರಡಲಿರುವ ಪ್ರಲ್ಹಾದ ಜೋಶಿ, ಶನಿವಾರ ಬೆಳಗ್ಗೆ ಹುಬ್ಬಳ್ಳಿಗೆ ವಾಪಸ್ಸು ಆಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

error: Content is protected !!