ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿಯಲ್ಲಿ ಹಾರಾಡಿದ ತಿರಂಗಾ: ಧ್ವಜಾರೋಹಣ ನೆರವೇರಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಬೆಳಗಾವಿ: ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರಿಂದ ಧ್ವಜಾರೋಹಣ ನೆರವೇರಿತು. ಧ್ವಜಾರೋಹಣ ಬಳಿಕ ಸಚಿವರು ವಿವಿಧ ಪೋಲಿಸ್ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಮಾಸ್ಕ್ ಧರಿಸುವ ಮೂಲಕ ಎಲ್ಲ ಪೊಲೀಸ್ ಪಡೆಗಳು ಪರೇಡ್ ನಲ್ಲಿ ಪಾಲ್ಗೊಂಡವು. ಪರೇಡ್ ನಂತರ ಮಾತನಾಡಿದ ಸಚಿವರು ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದ್ರು.

ಇದೆ ವೇಳೆ ಮಾತನಾಡುತ್ತ, ಸ್ವಾತಂತ್ರ್ಯ ನಮ್ಮ ದೇಶದ ಅಸ್ಮಿತೆ, ದೇಶದ ಸ್ವಾಭಿಮಾನವಾಗಿದೆ. ಅನೇಕ ಮಹನೀಯರ ಬಲಿದಾನ, ತ್ಯಾಗ ಅವಿಸ್ಮರಣೀಯ. ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ ಪ್ರಮುಖವಾಗಿದೆ. ಸಿಎಂ ಯಡಿಯೂರಪ್ಪ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಅಲ್ಲದೇ ಪ್ರವಾಹ, ಕೊರೊನಾ ಸಂಕಷ್ಟವನ್ನ ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಸರ್ಕಾರದ ಸಾಧನೆಗಳನ್ನು ಕೊಂಡಾಡಿದ ಸಚಿವರು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ ಎಂದು ಹೇಳಿದರು.

ಅಲ್ಲದೇ ಅನೇಕ ಜಾತಿ-ಧರ್ಮಗಳು, ವಿಭಿನ್ನ ಸಂಸ್ಕೃತಿಯ ಜನರು, ನೂರಾರು ಭಾಷೆಗಳು ಹೀಗೆ ವೈವಿಧ್ಯಮಯವಾಗಿರುವ ವಿಶಾಲ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ. ಕೋವಿಡ್ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಪರಸ್ಪರ ಸುರಕ್ಷಿತ, ವೈಯಕ್ತಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಸರ್ಕಾರದ ಸೂಚನೆಗಳನ್ನು ಪಾಲಿಸಿ ಈ ಸಾಂಕ್ರಾಮಿಕ ರೋಗದಿಂದ ನಮ್ಮ ಕುಟುಂಬವನ್ನು ಹಾಗೂ ಸಮಾಜವನ್ನು ರಕ್ಷಿಸೋಣ ಎಂದ ಸಚಿವರು, ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ, ಕೋಮು-ಸಾಮರಸ್ಯ, ಸೌಹಾರ್ದತೆ, ಭಾವೈಕ್ಯತೆ ನೆಲೆಗೊಂಡು ಸಮಸ್ತ ಜನತೆ ಸಂತೋಷದಿಂದ ಶಾಂತಿಯುತ ಸಹಬಾಳ್ವೆ ನಡೆಸಲಿ ಎಂದು ಹಾರೈಸುತ್ತೇನೆ ಎಂದ್ರು.

*** ಜೈ ಹಿಂದ್-ಜೈ ಕರ್ನಾಟಕ ***

error: Content is protected !!