ಕೂಗು ನಿಮ್ಮದು ಧ್ವನಿ ನಮ್ಮದು

ಮತದಾನದ ದಿನ ಪ್ರವಾಸಿ ತಾಣಗಳಿಗೆ ನಿರ್ಬಂಧ

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ನಡೆಯುವ ಚುನಾವಣೆಗೆ ಮತದಾರರು ತಪ್ಪದೇ ಮತ ಚಲಾಯಿಸುವ ಉದ್ದೇಶದಿಂದ ಸರ್ಕಾರ ರಜಾ ಘೋಷಣೆ ಮಾಡಿದೆ. ಆದರೆ ಕೆಲ ಮತದಾರರು ಮತ ಚಲಾಯಿಸದೆ ತಮಗೆ ಸಿಕ್ಕ ರಜೆಯಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಕೆಲ ಪ್ರಮುಖ ಪ್ರವಾಸಿ ತಾಣಗಳಿಗೆ ಮತದಾನದ ದಿನದಂದು ನಿರ್ಬಂಧ ಹೇರಲಾಗಿದೆ.

ಅಲ್ಲದೆ ಮತದಾನ‌ ಮಾಡಿ ಬಂದವರಿಗೆ ಮಾತ್ರ ಪ್ರವಾಸಿ ವಾಹನಗಳಲ್ಲಿ ಪ್ರಯಾಣಿಸಲು ಅಥವಾ ಬಳಸಲು ಅವಕಾಶ ನೀಡಬೇಕೆಂದು ಮೈಸೂರು ಜಿಲ್ಲಾ ಟ್ರ್ಯಾವಲ್ಸ್ ಮಾಲೀಕರು ನಿರ್ಧರಿಸಿದ್ದಾರೆ.

error: Content is protected !!