ಕೂಗು ನಿಮ್ಮದು ಧ್ವನಿ ನಮ್ಮದು

ಕನಕಪುರ ಕೋಟೆಗೆ ಸಿಎಂ ಬೊಮ್ಮಾಯಿ ಎಂಟ್ರಿ, ಆರ್.ಅಶೋಕ್ ಪರ ಮತಬೇಟೆ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಮೂರೇ ಮೂರು ದಿನ ಬಾಕಿ. ಮೇ10 ರಂದು ಮತದಾನ ನಡೆಯಲಿದ್ದು, 13 ರಂದು ಫಲಿತಾಂಶ ಹೊರಬೀಳಲಿದೆ. ನಾಳೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ರಾಜ್ಯದಲ್ಲಿ ಪ್ರಬಲ ಮೂರು ಪಕ್ಷಗಳು ಭರ್ಜರಿ ಮತಬೇಟೆಯಾಡುತ್ತಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಮೂರು ಪಕ್ಷಗಳು ಪಣತಟ್ಟಿವೆ.

ಶತಾಗತಾಯ ಸರ್ಕಾರ ರಚಿಸಲು ಕಾಂಗ್ರೆಸ್‌ ರಣತಂತ್ರಗಳನ್ನು ಹೆಣೆದು, ಸರ್ಕಾರದ ವಿರುದ್ಧ ಅನೇಕ ಬ್ರಹ್ಮಾಸ್ತ್ರಗಳನ್ನು ಬಿಡುತ್ತದೆ. ಇತ್ತ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಬಿಜೆಪಿ ತನ್ನ ಕೆಲಸದ ಜೊತೆ ಮೋದಿ ಫೇಮ್‌ ಇಟ್ಟುಕೊಂಡು ಮತದಾರರ ಮುಂದೆ ಬರುತ್ತಿದೆ. ಉಭಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡಿವೆ.

error: Content is protected !!