ಕೂಗು ನಿಮ್ಮದು ಧ್ವನಿ ನಮ್ಮದು

ಶುಕ್ರವಾರವೂ ವರುಣಾದಲ್ಲಿ ದುನಿಯಾ ವಿಜಯ್, ನಿಶ್ವಿಕಾ ನಾಯ್ಡು ಮತ್ತು ಲೂಸ್ ಮಾದ ಜೊತೆ ಸಿದ್ದರಾಮಯ್ಯ ಅಬ್ಬರದ ಪ್ರಚಾರ

ಮೈಸೂರು: ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಇಂದು ಸಹ ಅಬ್ಬರದ ಪ್ರಚಾರ ನಡೆಸಿದರು. ಅವರೊಂದಿಗೆ ನಿನ್ನೆ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿನಿಮಾ ತಾರೆಯರು ದುನಿಯಾ ವಿಜಯ್ ಲೂಸ್ ಮಾದ (ಯೋಗೇಶ್) ಮತ್ತು ನಿಶ್ವಿಕಾ ನಾಯ್ಡು ಕೂಡ ಪ್ರಚಾರ ವಾಹನದಲ್ಲಿ ಕಾಣಿಸಿದರು. ವಾಹನದಲ್ಲಿ ನಿಂತ ಸಿದ್ದರಾಮಯ್ಯ ಮೈಕ್ ಹಿಡಿದು ಮಾತಾಡುತ್ತಿದ್ದರಾದರೂ ಸದ್ದು ಗದ್ದಲದಲ್ಲಿ ಅದು ಸರಿಯಾಗಿ ಕೇಳಿಸಲಿಲ್ಲ.

ಸಿದ್ದರಾಮಯ್ಯ ಮತ್ತು ನಟನಟಿಯರ ಮೇಲೆ ಬೆಂಬಲಿಗರು ಹೂಮಳೆಗರೆಯುವುದು ಜಾರಿಯಲ್ಲಿತ್ತು. ಚುನಾವಣಾ ಪ್ರಚಾರ ನಡೆಯುತ್ತಿದ್ದರೂ ಸಿನಿಮಾ ತಾರೆಯರ ಅಭಿಮಾನಿಗಳು ವಾಹನ ಹತ್ತಿ ಸೆಲ್ಫೀಗಳನ್ನು ತೆಗೆದುಕೊಳ್ಳುವುದು ಕೂಡ ನಡೆದೇ ಇತ್ತು.

error: Content is protected !!