ಕೂಗು ನಿಮ್ಮದು ಧ್ವನಿ ನಮ್ಮದು

SDPI-PFI ಕಪಿಮುಷ್ಟಿಯಲ್ಲಿದೆ ಕಾಂಗ್ರೆಸ್: ಸಿಎಂ ಬೊಮ್ಮಾಯಿ

ಬಿಜೆಪಿ ಪಾಳಯದಿಂದ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ, ಅಮಿತ್‌ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಮುಖಂಡರು ರಾಜ್ಯಕ್ಕೆ ಕಾಲಿಟ್ಟಿದ್ದಾರೆ. ಕೈ ಪಾಳಯದಲ್ಲೂ ಸಹ ಶಕ್ತಿ ಪ್ರದರ್ಶನ ಜೋರಾಗಿದೆ. ಪ್ರಿಯಾಂಕ ಗಾಂಧಿ ಸೇರಿದಂತೆ ಅನೇಕರು ಕರುನಾಡಿದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ.


ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಪಕ್ಷಗಳ ಅಬ್ಬರ ಜೋರಾಗಿದ್ದು, ತಮ್ಮ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಪ್ರಚಾರದ ಕಾವು ರಂಗೇರಿದೆ. ಬಿಜೆಪಿ ಪಾಳಯದಿಂದ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ. ನಡ್ಡಾ, ಅಮಿತ್‌ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಮುಖಂಡರು ರಾಜ್ಯಕ್ಕೆ ಕಾಲಿಟ್ಟಿದ್ದಾರೆ. ಕೈ ಪಾಳಯದಲ್ಲೂ ಸಹ ಶಕ್ತಿ ಪ್ರದರ್ಶನ ಜೋರಾಗಿದೆ. ಪ್ರಿಯಾಂಕ ಗಾಂಧಿ ಸೇರಿದಂತೆ ಅನೇಕರು ಕರುನಾಡಿದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ.


ಕಾಂಗ್ರೆಸ್ ಪಕ್ಷ ಎಸ್.ಡಿ.ಪಿ.ಐ ಹಾಗೂ ಪಿಎಫ್ಐ ಕಪಿಮುಷ್ಟಿಯಲ್ಲಿದ್ದು, ಅದರಿಂದ ಹೊರಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ನಾವು ಎಸ್.ಡಿ.ಪಿ.ಐ, ಪಿಎಫ್ಐ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತದೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದರು.


ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಭಜರಂಗದಳ ನಿಷೇಧ ವಿಚಾರ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಜಾತಿ ಹೆಸರಲ್ಲಿ ವಿಷಬೀಜ ಬಿತ್ತುವುದೇ ಕಾಂಗ್ರೆಸ್ ಪಕ್ಷ. ಮೊದಲು ಸಿದ್ದರಾಮಯ್ಯ, ಡಿಕೆಶಿಯನ್ನ ಬಂಧಿಸಿ ಜೈಲಿಗೆ ಅಟ್ಟಬೇಕು. ಈ ಬಗ್ಗೆ ದೂರು ಕೊಡುವ ಅವಶ್ಯಕತೆ ಇಲ್ಲ. ಪಿಎಎಫ್‌ಐ ಸಂಘಟನೆ ಗೋಹತ್ಯೆ ಮಾಡುತ್ತಿದೆ. ಗೋಹತ್ಯೆ ತಡೆಯಲು ಹೋದ ಭಜರಂಗದಳ ಕಾರ್ಯಕರ್ತರ ಕೊಲೆ ಆಗಿದೆ. ಪಿಎಎಫ್‌ಐ ಸಂಘಟನೆ ಮೇಲಿದ್ದ 123 ಕೇಸ್ ವಾಪಾಸು ತೆಗೆದುಕೊಳ್ಳಲಾಗಿದೆ. ಭಯೋತ್ಪಾದನೆಗೆ ಕಾಂಗ್ರೆಸ್ ನೇರವಾಗಿ ಬೆಂಬಲ ನೀಡುತ್ತಿದೆ. ನೇರವಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಹೇಳಿದ್ದಾರೆ.


ಕಾಂಗ್ರೆಸ್‌ ಪ್ರಣಾಳಿಕೆ ನೋಡಿದರೆ ದೇಶವನ್ನು ಶ್ರೀಲಂಕಾ, ಪಾಕಿಸ್ತಾನದ ರೀತಿ ತೆಗೆದುಕೊಂಡು ಹೋಗುತ್ತಾರೆ. ದೇಶದಲ್ಲಿ ಅವರಿಗೆ ನೆಲೆಯೇ ಇಲ್ಲ. ಅವರು ಈಗಾಗಲೇ ದಿವಾಳಿಯಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಶೇ.75ಕ್ಕೆ ಏರಿಸುವ ಭರವಸೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಇನ್ನು ಬಜರಂಗ ದಳ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ತನ್ನ ಚಟುವಟಿಕೆಗಳನ್ನು ನಡೆಸುತ್ತಿರುವ ದೇಶ ಭಕ್ತ ಸಂಘಟನೆ ಅದು ಎಂದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಕುರಿತು ಆಡುತ್ತಿರುವ ಮಾತನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದರು.


ಕಳೆದ ದಿನ ರಾತ್ರಿ ಚುನಾವಣಾ ಪ್ರಚಾರಕ್ಕೆಂದು ಸಚಿವ ನಾರಾಯಣಗೌಡ ಅವರು ತೆರಳುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ವಾಹನ ತಡೆದು ಅಡ್ಡಿಪಡಿಸಿದ್ದಾರೆ. ಪಕ್ಷಕ್ಕೆ ಮೋಸ ಮಾಡಿಹೋದ ನೀವು ನಮ್ಮೂರಿಗೆ ಬಂದು ಪ್ರಚಾರ ಮಾಡದಂತೆ ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಚಿವರು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ಮಾತಿನ ಚಕಮಕಿ ನಡೆದಿದೆ. ಇನ್ನು ಸಚಿವರ ಜೊತೆಗಿದ್ದ ಅಂಗರಕ್ಷಕರು ಮತ್ತು ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಜೆಡಿಎಸ್ ಕಾರ್ಯಕರ್ತರ ದೌರ್ಜನ್ಯದ ನಡೆಗೆ ಸಚಿವ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಬಳ್ಳಾರಿ ಗ್ರಾಮೀಣದಲ್ಲಿ ರಾಜಕೀಯ ಚಿತ್ರಣ ರಂಗೇರಿದ್ದು, ಶ್ರೀರಾಮುಲು ಗೆಲುವಿಗಾಗಿ ಅವರ ಪತ್ನಿ ಭಾಗ್ಯಲಕ್ಷ್ಮೀ ಕ್ಯಾಂಪೇನ್ ಮಾಡುತ್ತಿದ್ದಾರೆ. ಇದುವರೆಗೆ ಸಾರ್ವಜನಿಕ ವಲಯದಲ್ಲಿ ಎಲ್ಲೂ ಕಾಣಿಸಿಕೊಳ್ಳದ ಶ್ರೀರಾಮುಲು ಪತ್ನಿ, ಇದೀಗ ಪತಿಯ ಗೆಲುವಿಗಾಗಿ ಶತಾಯಗತಾಯ ಹೋರಾಡುತ್ತಿದ್ದಾರೆ.

error: Content is protected !!