ನಿಪ್ಪಾಣಿ: ನಿಪ್ಪಾಣಿ ಮತಕ್ಷೇತ್ರದ ನಾಂಗನೂರ ಗ್ರಾಮದಲ್ಲಿ, ವಿಧಾನಸಭಾ ಚುನಾವಣಾ ಹಿನ್ನಲೆ ಸಚಿವೆ ಶಶಿಕಲಾ ಜೊಲ್ಲೆಯವರು ಚುನಾವಣಾ ಪ್ರಚಾರ ಸಭೆ ನಡೆಸಿ, ಮತ್ತಷ್ಟು ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲ ನೀಡಿ ಎಂದು ಮತಯಾಚನೆ ಮಾಡಿದರು.
ಇದೇ ವೇಳೆ ಗ್ರಾಮದ ದಗಡು ಚೆಂಡಕೆ, ವಿನೋದ ಚೌಗಲೆ, ದಯಾನಂದ ಕೋಗಲೆ, ಜ್ಯೋತಿರ್ಲಿಂಗ ಚೆಂಡಕೆ, ಶೀತಲ ಚೆಂಡಕೆ, ಸಂತೋಷ ಕೊಗಲೆ, ಸೇರಿದಂತೆ ಒಟ್ಟು 20 ಕ್ಕೂ ಅಧಿಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ ಉಪಾಧ್ಯಕ್ಷರಾದ ಎಂ.ಪಿ. ಪಾಟೀಲ, ಸದಸ್ಯರು ಸ್ಥಳೀಯ ಮುಖಂಡರು ಕಾರ್ಯಕರ್ತರು ಹಾಗೂ ಮತದಾರ ಬಾಂಧವರು ಉಪಸ್ಥಿತರಿದ್ದರು.