ಕೂಗು ನಿಮ್ಮದು ಧ್ವನಿ ನಮ್ಮದು

ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲಿದೆ: ಸಚಿವೆ ಶಶಿಕಲಾ ಅ ಜೊಲ್ಲೆ


– ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ – ಮತದಾರರಿಂದ ಭರ್ಜರಿ ಬೆಂಬಲ

ನಿಪ್ಪಾಣಿ: ಕಳೆದ ಎರಡು ಬಾರಿಯ ಅವಧಿಯಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದು, ಜನಸಾಮಾನ್ಯರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿರುವ ಹಿನ್ನಲೆಯಲ್ಲಿ ಕ್ಷೇತ್ರದ ಜನರ ಆಶೀರ್ವಾದ ಸದಾ ನನ್ನ ಮೇಲಿದೆ ಎಂದು ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವೆ ಶಶಿಕಲಾ ಅ ಜೊಲ್ಲೆ ಹೇಳಿದರು.

ನಿಪ್ಪಾಣಿ ಮತಕ್ಷೇತ್ರದ ಹಣಬರವಾಡಿ, ದತ್ತವಾಡಿ, ಶೆಂಡೂರ, ಗೊಂದಿಕೊಪ್ಪಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಅವರು ಮಾತನಾಡಿದರು, ಕಳೆದ ಎರಡು ಬಾರಿ ಶಾಸಕಿಯಾಗಿ ಆಯ್ಕೆ ಮಾಡುವ ಮೂಲಕ ಕ್ಷೇತ್ರದಲ್ಲಿ ಆಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಸದಾವಕಾಶ ನೀಡಿದ್ದೀರಿ. ನಾನು ಕ್ಷೇತ್ರದ ಮತದಾರರು ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿದ್ದೇನೆ. ಕಳೆದ 10 ವರ್ಷಗಳಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜನಸಾಮಾನ್ಯರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಈ ಎಲ್ಲಾ ಕಾರ್ಯಗಳ ಹಿನ್ನಲೆಯಲ್ಲಿ ಕ್ಷೇತ್ರದ ಮತದಾರರು ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಎಂದು ಹೇಳಿದರು. ಈ ವೇಳೆ ಕ್ಷೇತ್ರದ ಬಿಜೆಪಿ ಪ್ರಮುಖರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಅ ಜೊಲ್ಲೆ ಅವರಿಗೆ ಸಾಥ್‌ ನೀಡಿದರು.

ನಿಪ್ಪಾಣಿಕರ ದೇಸಾಯಿ ಸರಕಾರ ಕುಟುಂಬದವರು ಬಿಜೆಪಿ ಸೇರ್ಪಡೆ.

ನಿಪ್ಪಾಣಿ ನಗರದ ಹೆಸರಾಂತ ನಿಪ್ಪಾಣಿಕರ ದೇಸಾಯಿ ಸರಕಾರ ಮನೆತನದ ಶ್ರೀಮಂತ ಸಿದ್ದೋಜಿರಾಜೆ ರಾನೋಜಿರಾವ ದೇಸಾಯಿ ನಿಪ್ಪಾಣಿಕರ, ಉದಯಸಿಂಹ ಉರ್ಫ ರಾಜೇಶ ನಿಪ್ಪಾಣಿಕರ ದೇಸಾಯಿ ಸರಕಾರ, ಅಪ್ಪಾಸಾಹೇಬ ಪರ್ವತರಾವ ದೇಸಾಯಿ ನಿಪ್ಪಾಣಿಕರ, ಮಾನಸಿಂಗರಾವ ರಾನೋಜಿರಾವ ದೇಸಾಯಿ ನಿಪ್ಪಾಣಿಕರ, ರಣಜಿತಸಿಂಹ ರಾನೋಜಿರಾವ ದೇಸಾಯಿ ನಿಪ್ಪಾಣಿಕರ, ಅಮರಸಿಂಹ ದೇಸಾಯಿ ನಿಪ್ಪಾಣಿಕರ ಹಾಗೂ ಸಮಸ್ತ ನಿಪ್ಪಾಣಿಕರ ಕುಟುಂಬಸ್ಥರು ಇತರೆ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನು ಸಚಿವೆ ಶಶಿಕಲಾ ಜೊಲ್ಲೆ ಜಿ ಯವರು ಆತ್ಮೀಯವಾಗಿ ಬಿಜೆಪಿಗೆ ಬರಮಾಡಿಕೊಂಡರು.

error: Content is protected !!