ನಿಪ್ಪಾಣಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು, ಸಚಿವೆ ಶಶಿಕಲಾ ಜೊಲ್ಲೆಯವರಿಂದ ನಗರದಲ್ಲಿ ನಡೆದ ಅಭಿವೃದ್ಧಿಗಳನ್ನು ಕಂಡು ನಾವು ಬಿಜೆಪಿ ಪಕ್ಷಕ್ಕೆ ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ಸ್ಥಳೀಯ ನಿವಾಸಿ ಉದಯ ಅಕ್ಕೋಳೆ ಹೇಳಿದರು.
ನಗರದ ಅಕ್ಕೋಳೆ ಪರಿವಾರದ ನೂರಾರು ಬಾಂಧವರು ಇತರೆ ಪಕ್ಷಗಳನ್ನು ತೊರೆದು ಭಾನುವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಅವರು ಮಾತನಾಡಿದರು. ‘ನಗರದಲ್ಲಿ ಇನ್ನೂವರೆಗೆ ನಾವು ನೋಡದ ಅಭಿವೃದ್ಧಿಗಳನ್ನು ಮಾಡಿದ ಶ್ರೇಯಸ್ಸು ಸಚಿವೆ ಜೊಲ್ಲೆಯವರಿಗೆ ಸಲ್ಲುತ್ತದೆ. ಅಲ್ಲದೆ ಸಕಾರದ ಯೋಜನೆಗಳನ್ನು ಫಲಾನುಭವಿಗಳ ಮನೆಮನೆಗೆ ತಲುಪಿಸುವ ಕಾರ್ಯವನ್ನೂ ಅವರು ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿ ಅಕ್ಕೋಳೆ ಮನೆತನದವರಾದ ನಾವೆಲ್ಲ ಹಲವಾರು ಪರಿವಾರದವರು ಸೇರಿ ಸಚಿವೆ ಜೊಲ್ಲೆಯವರನ್ನು ಬೆಂಬಲಿಸಲು ಹಾಗೂ ಅತ್ಯಧಿಕ ಮತಗಳಿಂದ ಅವರನ್ನು ಚುನಾಯಿಸತಗೊಳಿಸಲು ನಿರ್ಣಯಿಸಿದ್ದೇವೆ’ ಎಂದರು.
ಸುನೀಲ ಅಕ್ಕೋಳೆ, ಲಕ್ಷ್ಮಣ ಅಕ್ಕೋಳೆ, ಉದಯ ಅಕ್ಕೋಳೆ, ಅಪ್ಪಾಸಾಹೇಬ ಅಕ್ಕೋಳೆ, ರೋಹನ ಅಕ್ಕೋಳೆ, ರುಷಿಕೇಶ ಅಕ್ಕೋಳೆ, ಆನಂದ ಅಕ್ಕೋಳೆ, ಅರುಣ ಅಕ್ಕೋಳೆ, ಗೀತಾ ಅಕ್ಕೋಳೆ, ಪೂಜಾ ಅಕ್ಕೋಳೆ, ವಿಮಲ ಅಕ್ಕೋಳೆ, ಜ್ಯೋತಿ ಅಕ್ಕೋಳೆ, ಮೊದಲಾದವರು ಸೇರಿದಂತೆ ನೂರಾರು ಕುಟುಂಬ ಸದಸ್ಯರು ಇತರ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಪಕ್ಷದ ಶಾಲು ತೊಡಿಸಿ ಸ್ವಾಗತಿಸಿದರು.