ಕೂಗು ನಿಮ್ಮದು ಧ್ವನಿ ನಮ್ಮದು

ಶಿಗ್ಗಾವಿಯಲ್ಲಿ ಬೊಮ್ಮಾಯಿ ಪರ ಪತ್ನಿ ಚೆನ್ನಮ್ಮ ಮತಯಾಚನೆ

ಹಾವೇರಿ:ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆಯ ಕಾವು. ಅದರಲ್ಲೂ ರಾಜ್ಯದಲ್ಲಿ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಹಾವೇರಿ ಜಿಲ್ಲಾ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ಬಿರುಸುಗೊಂಡಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಬಿಜೆಪಿಯಿಂದ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್‌ನಿಂದ ಯಾಸೀರಖಾನ್ ಪಠಾಣ ಮತ್ತು ಜೆಡಿಎಸ್‌ನಿಂದ ಶಶೀಧರ ಯಲಿಗಾರ ಕಣದಲ್ಲಿದ್ದಾರೆ.

ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಮಧ್ಯೆ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷಕಾಗಿದ್ದು ಅವರು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲು ರಾಜ್ಯದ ವಿವಿಧಡೆ ಸಂಚರಿಸುತ್ತಿದ್ದಾರೆ. ಸಿಎಂ ಆಗಿದ್ದು ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವುದು ಸಿಎಂ ಬಸವರಾಜ್ ಬೊಮ್ಮಾಯಿಗೆ ದೊಡ್ಡ ಜವಾಬ್ದಾರಿ ಬಂದಿದೆ. ಈ ಮಧ್ಯ ತಾವು ಸ್ಪರ್ಧಿಸುವ ಶಿಗ್ಗಾಂವಿ ಸವಣೂರು ಕ್ಷೇತ್ರದ ಮತದಾರನನ್ನ ತಲುಪಲು ಈ ಹಿಂದಿನ ಚುನಾವಣೆಗಳಂತೆ ಬೊಮ್ಮಾಯಿಗೆ ಸಾಧ್ಯವಾಗುತ್ತಿಲ್ಲಾ.

ಕ್ಷೇತ್ರದ ಪ್ರತಿ ಗ್ರಾಮಕ್ಕೆ ಭೇಟಿ
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತದಾರನ ಮನವೊಲೈಸಿಲು ಸಿಎಂ ಬಸವರಾಜ್ ಬೊಮ್ಮಾಯಿ ಸಹೋದರ, ಪತ್ನಿ ಚೆನ್ನಮ್ಮ ಮತ್ತು ಪುತ್ರ ಭರತ ಬೊಮ್ಮಾಯಿ ಮುಂದಾಗಿದ್ದಾರೆ. ಶಿಗ್ಗಾಂವಿ ಕ್ಷೇತ್ರದ ಪ್ರತಿ ಗ್ರಾಮಕ್ಕೆ ತೆರಳಿ ಪ್ರತಿ ಮನೆ ಮನೆಗೆ ಹೋಗಿ ಪ್ರತಿ ಮತದಾರನ ಮುಟ್ಟಲು ಯತ್ನಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಪತ್ನಿ ಚೆನ್ನಮ್ಮ ತಮ್ಮದೆ ಆದ ಮಹಿಳಾ ತಂಡ ಕಟ್ಟಿಕೊಂಡು ಊರೂರಿಗೆ ತೆರಳಿ ಜನರಲ್ಲಿ ಪತಿ ಪರ ಮತಯಾಚನೆ ಮಾಡುತ್ತಿದ್ದಾರೆ. ಶಿಗ್ಗಾಂವಿ ಕ್ಷೇತ್ರದ ಹನುಮರಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚೆನ್ನಮ್ಮ ಮತಯಾಚನೆ ಮಾಡಿದರು. ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ, ಗ್ರಾಮದ ಶಿಭಾರಕ್ಕೆ ತೆರಳಿ ಬೀರಲಿಂಗೇಶ್ವರನಿಗೆ ಪುಷ್ಪಾರ್ಪಣೆ ಸಲ್ಲಿಸಿದ ನಂತರ ಗ್ರಾಮದಲ್ಲಿ ಮತಯಾಚನೆ ಮಾಡಿದರು.

ಮಹಿಳೆಯರಿಗೆ ಉದ್ಯೋಗ
ಪ್ರತಿ ಮನೆ ಮನೆಗೆ ತೆರಳಿ ಮನೆಯ ಸದಸ್ಯರನ್ನ ಭೇಟಿ ಮಾಡಿ ತಮ್ಮ ಪತಿ ಬೊಮ್ಮಾಯಿಗೆ ಮತ ಹಾಕುವಂತೆ ಮನವಿ ಮಾಡಿದರು. ಅಲ್ಲದೆ ಈ ಬಾರಿ ತಮ್ಮ ಪತಿ ಬೊಮ್ಮಾಯಿಗೆ ರಾಜ್ಯದ ಜವಾಬ್ದಾರಿ ಇದೆ. ಅವರು ನಿಮ್ಮನ್ನು ಭೇಟಿ ಆಗಲು ಉತ್ಸುಕರಾಗಿದ್ದಾರೆ ಆದರೆ ಜವಾಬ್ದಾರಿ ಹೆಚ್ಚು ಇರುವದರಿಂದ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಅವರೇ ನಿಮ್ಮಿಂದ ಮತಯಾಚನೆ ಮಾಡಿದ್ದಾರೆ ಎಂದು ತಿಳಿದು ಸಿಎಂ
ಬಸವರಾಜ್ ಬೊಮ್ಮಾಯಿಗೆ ಮತ ಹಾಕುವಂತೆ ಮನವಿ ಮಾಡಿದರು. ಇನ್ನು ಕೆಲ ಗಾರ್ಮೆಂಟ್ಸ ಕಾರ್ಮಿಕರ ಭೇಟಿ ಮಾಡಿದ ಚೆನ್ನಮ್ಮ ಕಾರ್ಮಿಕರ ಕಷ್ಟ ಸುಖಗಳ ಮಾಹಿತಿ ಪಡೆದರು. ತಮ್ಮ ಪತಿ ಈಗಾಗಲೇ ಶಿಗ್ಗಾಂವಿ ಸವಣೂರು ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಹತ್ತಾರು ಗಾರ್ಮೆಂಟ್ಸ್ ಫ್ಯಾಕ್ಟರಿ ತೆರೆದು ಸಾವಿರಾರು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಈ ಬಾರಿ ಸಹ ಆಯ್ಕೆಯಾದರೇ ಇನ್ನು ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುವದಾಗಿ ಚೆನ್ನಮ್ಮ ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಕ್ಕೆ ತನ್ನಿ
ಸಿಎಂ ಬಸವರಾಜ್ ಬೊಮ್ಮಾಯಿ ಈ ಕ್ಷೇತ್ರದ ಶಾಸಕರಾಗಿದ್ದಾಗಿನಿಂದ ಕ್ಷೇತ್ರದಲ್ಲಿ ಅಭಿವೃದ್ದಿ ಪರ್ವ ಆರಂಭವಾಗಿದೆ ಎಂದು ತಿಳಿಸಿದರು. ಪ್ರತಿಯೊಬ್ಬರಿಗೊ ಕುಡಿಯುವ ನೀರು ರಸ್ತೆ ಶಿಕ್ಷಣ ಆರೋಗ್ಯ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಆದರೂ ಸಹ ಕೆಲವರಿಗೆ ಮನೆ ಸಮಸ್ಯೆ ಇದ್ದು ಈ ಎಲ್ಲ ಸಮಸ್ಯೆಗಳನ್ನ ನಾನು ಆಲಿಸಿದ್ದೇನೆ ಇವುಗಳನ್ನ ಅವರಿಗೆ ತಿಳಿಸಿ ಈ ಸಮಸ್ಯೆ ಸಹ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷೆ ಶೋಭಾ ನಿಶ್ಸೀಮಗೌಡ್ರ ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲಿ ಶಾಸಕರಾಗಿದ ಸಚಿವರಾಗಿ ಮತ್ತು ಸಿಎಂ ಆಗಿ ನೂರಾರು ಅಭಿವೃದ್ದಿ ಕಾರ್ಯ ಮಾಡಿದ್ದಾರೆ. ಈಗಲೂ ಸಹ ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಅವರ ಅಭಿವೃದ್ದಿ ಕಾರ್ಯಗಳು ಕಾಣಿಸುತ್ತವೆ. ಈ ಬಾರಿ ಮತ್ತೆ ಅವರನ್ನ ಅಧಿಕಾರಕ್ಕೆ ತರುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಕಾರಣಿಕರ್ತರಾಗಬೇಕು. ಇಷ್ಟು ದಿನ 10 ಸಾವಿರ 15 ಸಾವಿರ ಮತಗಳ ಅಂತರದಿಂದ ಅವರನ್ನ ಆಯ್ಕೆ ಮಾಡಿದ್ದೇವೆ. ಆದರೆ ಈ ಬಾರಿ 50 ಸಾವಿರಕ್ಕೂ ಅಧಿಕ ಮತಗಳಿಂದ ಅವರ ಜಯಗಳಿಸುವಂತೆ ನೋಡಿಕೊಳ್ಳಬೇಕು ಎಂದು ಶೋಭಾ ತಿಳಿಸಿದರು.

error: Content is protected !!