ಕೂಗು ನಿಮ್ಮದು ಧ್ವನಿ ನಮ್ಮದು

ಡಿಕೆಶಿ ನಾಮಪತ್ರ ಅಂಗೀಕಾರ: ಇನ್ನು ಕನಕಪುರ ಬಂಡೆಗಿಲ್ಲ ಅಡ್ಡಿ..!

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ಡಿಕೆಶಿ ನಾಮಪತ್ರವನ್ನು ರಾಜ್ಯ ಚುನಾವಣಾ ಪ್ರಾಧಿಕಾರ ಅಂಗೀಕಾರಮಾಡಿದೆ. ಇದರಿಂದ ಐಟಿ, ಇಡಿ ಸೇರಿದಂತೆ ಯಾವುದೇ ದಾಳಿ ಭಯ ಡಿಕೆಶಿಗೆ ಇಲ್ಲ. ನಿರ್ಭಯವಾಗಿ ನಿರ್ಭೀತಿಯಿಂದ ಚುನಾವಣಾ ಕಾರ್ಯಗಳಲ್ಲಿ ಭಾಗಿಯಾಗಬಹುದು. ಇನ್ನು ಅಣ್ಣನ ನಾಮ ಪತ್ರ ಅಂಗೀಕಾರವಾದ ಹಿನ್ನೆಲೆ ಡಿ.ಕೆ. ಸುರೇಶ್‌ ನಾಮಪತ್ರವನ್ನು ಹಿಂಪಡೆಯುವ ಸಾಧ್ಯತೆ ಇದೆ.

ನಾಮಪತ್ರ ತಿರಸ್ಕೃತವಾಗುವ ಭೀತಿಯಿಂದ ಡಿ.ಕೆ.ಶಿವಕುಮಾರ್‌ ಅವರು ಮುಂಜಾಗೃತ ಕ್ರಮವಾಗಿ ಡಿ.ಕೆ. ಸುರೇಶ್‌ ನಾಮಪತ್ರ ಸಲ್ಲಿಸಿದ್ದರು. ಅದ್ರೆ ಇದೀಗ ಚುನಾವಣಾ ಅಧಿಕಾರಿಗಳು ಡಿಕೆಶಿ ನಾಮಪತ್ರವನ್ನು ಅಂಗೀಕಾರ ಮಾಡಿದ್ದಾರೆ. ಇದರಿಂದಾಗಿ ದಾಳಿಯಂತ ಯಾವುದೇ ಭೀತಿಗೆ ಎದುರಾಗದೇ ಕೆಪಿಸಿಸಿ ಅಧ್ಯಕ್ಷರು ಚುನಾವಣೆಯಲ್ಲಿ ಭಾಗಿಯಾಗಬಹುದಾಗಿದೆ.

ಅಲ್ಲದೆ, ಬಿಜೆಪಿಯವರ ಷಡ್ಯಂತ್ರ ಏನುಬೇಕಾದರೂ ಆಗಬಹುದು. ಕಳೆದ ಬಾರಿಯೇ ನನ್ನ ಅರ್ಜಿ ತರಸ್ಕರಿಸಲು ಮುಂದಾಗಿದ್ದರು. ಆದರೆ ನಾನು ಐಟಿ ಅಧಿಕಾರಿಗಳ ಮುಂದೆ ಹೋಗಿ ಎಲ್ಲ ಮಾಹಿತಿ ನೀಡಿದೆ. ಕಳೆದ 15 ವರ್ಷಗಳಲ್ಲಿ ನಾನು ಒಂದು ಮನೆ ಬಿಟ್ಟರೆ ಉಳಿದಂತೆ ಯಾವುದೇ ಆಸ್ತಿ ಖರೀದಿ ಮಾಡಿಲ್ಲ. ಆದರೂ ಬಿಜೆಪಿ ಕುತಂತ್ರ ತಿಳಿದು ಮುಂಜಾಗರೂಕತೆ ವಹಿಸಿದ್ದಾಗಿ ಹೇಳಿದ್ದರು. ಸದ್ಯ ಷಡ್ಯಂತ್ರದ ಕಾರಣ ನೀಡಿ ನಿನ್ನೆ ಸಲ್ಲಿಸಿದ್ದ ನಾಮಪತ್ರವನ್ನು ಡಿ.ಕೆ ಸುರೇಶ್ ವಾಪಸ್ ಪಡೆಯಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಏ.24 ಕೊನೆಯ ದಿನವಾಗಿದೆ.

error: Content is protected !!