ಕೂಗು ನಿಮ್ಮದು ಧ್ವನಿ ನಮ್ಮದು

ತನ್ನ ಎರಡು ವರ್ಷದ ಮಗುವನ್ನು ಹತ್ಯೆ ಮಾಡಿ, ನದಿಗೆ ಎಸೆದ ಪಾಪಿ ತಂದೆ

ತಂದೆಯೇ ತನ್ನ ಎರಡು ವರ್ಷದ ಮಗುವನ್ನು ಕೊಲೆ ಮಾಡಿ, ನದಿಗೆ ಎಸೆದಿರುವ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ. 22 ವರ್ಷದ ವ್ಯಕ್ತಿಯು ವಿವಾಹೇತರ ಸಂಬಂಧ ಹೊಂದಿದ್ದು, ಆ ಮಹಿಳೆಯನ್ನು ಮದುವೆಯಾಗಲು ಮಗು ಅಡ್ಡಿಬರಬಾರದು ಎನ್ನುವ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಏಕೆಂದರೆ ಆ ಮಹಿಳೆಯು ಮಗುವನ್ನು ಬಿಟ್ಟು ಆ ವ್ಯಕ್ತಿ ತನ್ನ ಜತೆಗೆ ಬರಬೇಕೆಂದು ಬಯಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಹು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಬುಧವಾರ ಮುಂಜಾನೆ ಕೇಮ್ಕಾರ್ ಚೌಕ್ ಬಳಿಯ ಮಾಹಿಮ್-ಸಿಯಾನ್ ಕ್ರೀಕ್ ಲಿಂಕ್ ರಸ್ತೆಯಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಪ್ಲಾಸ್ಟಿಕ್ ಚೀಲದಲ್ಲಿ ಶವವಿದ್ದು, ಮಗುವಿನ ತಲೆ ಮತ್ತು ಬಲ ಮಣಿಕಟ್ಟಿನಲ್ಲಿ ಗಾಯದ ಗುರುತುಗಳಿದ್ದವು. ತಕ್ಷಣಕ್ಕೆ ಮಗು ಯಾರೆಂದು ಪತ್ತೆ ಹಚ್ಚಲು ಕಷ್ಟವಾಗಿತ್ತು. ಆದರೆ ಮಗುವನ್ನು ಹುಡುಕುತ್ತಿದ್ದ ಸಂಬಂಧಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು, ಬಳಿಕ ಶವವನ್ನು ಅವರಿಗೆ ತೋರಿಸಿದಾಗ ಗುರುತು ಹಿಡಿದಿದ್ದಾರೆ.

ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಬಾಲಕನ ಸಂಬಂಧಿಕರೊಂದಿಗೆ ವಿಚಾರಣೆ ನಡೆಸಿದಾಗ, ಆತನ ತಂದೆ ಧಾರಾವಿ ಕೊಳೆಗೇರಿಯಲ್ಲಿ ನೆಲೆಸಿದ್ದಾನೆ ಎಂಬ ಮಾಹಿತಿ ಮೇರೆಗೆ ಪೊಲೀಸರು ತೆರಳಿ ಆತನನ್ನು ಬಂಧಿಸಿದ್ದಾರೆ.

ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಟೈಲರ್ ಆಗಿ ಕೆಲಸ ಮಾಡುವ ಆರೋಪಿ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನು. ಆಕೆ ತನ್ನನ್ನು ಮದುವೆಯಾಗಲು ಬಯಸಿದರೆ ತನ್ನ ಹೆಂಡತಿ ಮತ್ತು ಮಗನನ್ನು ಬಿಟ್ಟು ಬಾ ಎಂದು ಷರತ್ತು ಹಾಕಿದ್ದಳು. ನಂತರ ಆರೋಪಿಗಳು ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಆಸೆ ತೋರಿಸಿ ಮಗುವನ್ನು ಕರೆದುಕೊಂಡು ಹೋಗಿ ಹತ್ಯೆ ಮಾಡಿ ಬಳಿಕ ನದಿಗೆ ಎಸೆದಿದ್ದರು

error: Content is protected !!