ಬೆಂಗಳೂರು: ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ದಾಖಲೆ ಇಲ್ಲದ 7 ಕೆಜಿಗೂ ಅಧಿಕ ಚಿನ್ನ ಜಪ್ತಿ ಮಾಡಲಾಗಿತ್ತು. 5 ಕೋಟಿಗೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಜಪ್ತಿ ಮಾಡಿದ್ದು ಮೂವರನ್ನು ವಿವೇಕ್ ನಗರ ಪೊಲೀಸರು ವಶಕ್ಕೆ ಪಡೆದಿದ್ದರು.
ಈಚರ್ ವಾಹನದಲ್ಲಿ ದಾಖಲೆ ಇಲ್ಲದೆ ಚಿನ್ನ, ಬೆಳ್ಳಿಯನ್ನು ಸಾಗಿಸಲಾಗುತ್ತಿತ್ತು. ವಿವೇಕ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ 7 ಕೆಜಿ 999 ಗ್ರಾಂ ಚಿನ್ನ, 46 ಕೆಜಿ 700 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದರು. ಹಾಗೂ ಈ ಬಗ್ಗೆ ಕೇಸ್ ದಾಖಲು ಮಾಡಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿತ್ತು.