ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಮಾತಾಡುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವೇದಿಕೆ ಮೇಲೆ ಕುಳಿತ ಎಲ್ಲ ನಾಯಕರ ಹೆಸರು ಹೇಳುತ್ತಾ ಸಂಬೋಧಿಸುತ್ತಾರಾದರೂ ತಮ್ಮ ಎಡಪಕ್ಕದಲ್ಲೇ ಕೂತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರು ಹೇಳುವುದನ್ನು ಮರೆತುಬಿಡುತ್ತಾರೆ. ಅದು ಅಚಾತುರ್ಯವೋ, ಉದ್ದೇಶಪೂರ್ವಕವೋ ಅಂತ ಅವರೇ ಹೇಳಬೇಕು.
ಸಿದ್ದರಾಮಯ್ಯ ಬಲಪಕ್ಕ ಕೂತಿದ್ದ ಎಮ್ ಬಿ ಪಾಟೀಲ್ ಅವರಿಗೆ ಶಿವಕುಮಾರ್ ಹೆಸರು ಮರೆತಿದ್ದನ್ನು ಜ್ಞಾಪಿಸುತ್ತಾರೆ. ಆಗ, ಸಿದ್ದರಾಮಯ್ಯ, ಸಾರಿ ಅಂತ ಹೇಳುತ್ತಾ, ಪಕ್ಕದಲ್ಲಿರುವವರ ಹೆಸರೇ ಮರೆತುಹೋಗುತ್ತದೆ ಎನ್ನುತ್ತಾರೆ. ಅವರ ಮಾತಿಗೆ ಶಿವಕುಮಾರ್ ಸೇರಿ ಎಲ್ಲರೂ ಜೋರಾಗಿ ನಗುತ್ತಾರೆ.