ಹುಬ್ಬಳ್ಳಿ: ಇಲ್ಲಿರುವ ಉಸ್ತುವಾರಿಗಳು ಹಾಗೂ ಇಲ್ಲಿನ ನಾಯಕರು ಬಿಜೆಪಿ ಅಧಿಕಾರಕ್ಕೆ ತರೋದು ಬೇಡ ಅನ್ನೋ ನಿರ್ಧಾರ ಮಾಡಿದ್ದಾರೆ ಅನ್ನಿಸುತ್ತೆ. ಮೋದಿ, ಅಮಿತ್ ಶಾ ಅವರಿಗೆ ಗ್ರೌಂಡ್ ರಿಪೋರ್ಟ್ ಗೊತ್ತಿಲ್ಲ ಎನ್ನುವ ಮೂಲಕ ಜಗದೀಶ್ ಶೆಟ್ಟರ್ ಪರೋಕ್ಷವಾಗಿ ರಾಜ್ಯ ಚುನಾಚಣೆ ಉಸ್ತುವಾರಿ ಧರ್ಮೆಂದ್ರ ಪ್ರಧಾನ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಎಲ್ಲ ಬೆಳವಣಿಗೆ ಹಿರಿಯರಿಗೆ ಗೌರವ ಕೊಡದೆ ಇರುವುದು, ಕೀಳಾಗಿ ನೋಡುವುದು ಬಿಜೆಪಿಗೆ ಮುಳುವಾಗಿದೆ. ಇದನ್ನ ಮೋದಿ ಅವರ ಗಮನಕ್ಕೆ ತರುವ ಪ್ರಯತ್ನ ನಾನು ಮಾಡಲ್ಲ. ಅವರು ತಿಳಿದುಕೊಳ್ಳಬೇಕು ಎಂದಿದ್ದಾರೆ.