ಗದಗ: ಜಗದೀಶ ಶೆಟ್ಟರ ಕರ್ನಾಟಕದ ಹಿರಿಯ ನಾಯಕ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ. ಅವರಿಗೆ ರಾಜಕೀಯವಾದ ಅವಮಾನ, ಟಿಕೆಟ್ ನಿರಾಕರಿಸೋದು ಬೇರೆ. ಆದರೆ ಅವರನ್ನ ನಡೆಸಿಕೊಂಡ ರೀತಿ ಅದು ರಾಜಕೀಯ ಕ್ಷೇತ್ರದಲ್ಲಿ ಸರಿಯಾದದ್ದಲ್ಲ.
ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರತಕ್ಕಂತದ್ದಲ್ಲ. ಅದಕ್ಕಿಂತ ಹೆಚ್ಚು ನಾ ಹೇಳೋದಿಲ್ಲ, ಯಾಕಂದ್ರೆ ಅದು ಅವರ ಪಕ್ಷದ ಆಂತರಿಕ ವಿಷಯ ಎಂದು ಶಾಸಕ ಎಚ್ಕೆ ಪಾಟೀಲ್ ಹೇಳಿದ್ದಾರೆ.