ಬೆಂಗಳೂರು: ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರ ‘ಈಗ ಅವರು ಜಗಳಗಂಟ ಪಕ್ಷಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ನಲ್ಲಿ ಅವರಿಗೆ ಭವಿಷ್ಯ ಇಲ್ಲ, ಇಷ್ಟು ವರ್ಷ ಅವರು ಬಿಜೆಪಿಯಲ್ಲಿ ಇದ್ದವರು. ಕಾಂಗ್ರೆಸ್ ಗೆ ಸೇರುವ ನಿರ್ಧಾರ ಮಾಡಬಾರದಿತ್ತು. ಲಕ್ಷ್ಮಣ ಸವದಿ ಬಹಳ ದೊಡ್ಡ ತಪ್ಪು ಮಾಡಿದ್ದಾರೆ.
ಅವರು ಕಾಂಗ್ರೆಸ್ ಗೆ ಹೋದ ಮೇಲೆ ಪಶ್ಚಾತ್ತಾಪ ಪಡುತ್ತಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಸವದಿ ಚುನಾವಣೆ ಸೋತ ನಂತರ ಕೂಡ ಅವರನ್ನು ಎಂಎಲ್ಸಿ, ಡಿಸಿಎಂ ಮಾಡಲಾಯಿತು. ಆದರೆ ಸವದಿ ಕಾಂಗ್ರೆಸ್ಗೆ ಹೋಗಿರುವುದು, ನಮ್ಮ ಕಾರ್ಯಕರ್ತರಿಗೆ ನೋವಾಗಿದೆ ಎಂದರು