ಕಿಚ್ಚ ಸುದೀಪ್ ನಟನೆಯ ‘ಬಚ್ಚನ್’ ಸಿನಿಮಾ ರಿಲೀಸ್ ಆಗಿ 10 ವರ್ಷ ಕಳೆದಿವೆ. 2013 ಏಪ್ರಿಲ್ 11ರಂದು ಬಚ್ಚನ್ ಸಿನಿಮಾ ಬಿಡುಗಡೆಯಾಗಿತ್ತು. ಸೈಕಲಾಜಿಕಲ್ ಆಕ್ಷನ್ ಸಿನಿಮಾ ಬಚ್ಚನ್ನ್ನು ಶಶಾಂಕ್ ನಿರ್ದೇಶಿಸಿದ್ದರು. ಸ್ಟೈಲಿಶ್ ಲುಕ್ನಲ್ಲಿ ನಟಿಸಿ ಸುದೀಪ್ ಎಲ್ಲರ ಮನಗೆದ್ದಿದ್ದರು. ಸುದೀಪ್ ಆಂಗ್ರಿ ಯಂಗ್ಮ್ಯಾನ್ ಆಗಿ ಈ ಸಿನಿಮಾದಲ್ಲಿ ಕಾಣಿಸಿದ್ದರು.
ಸಿನಿಮಾ 10 ವರ್ಷ ಪೂರೈಸಿದ್ದು, ಇದೂಗ ಕಿಚ್ಚನಿಗೆ ಪುತ್ರಿಯಿಂದ ಬಿಗ್ ಸರ್ಪ್ರೈಸ್ ಸಿಕ್ಕಿದೆ. ನಟ ಸುದೀಪ್ ‘ಬಚ್ಚನ್’ ಸಿನಿಮಾದಲ್ಲಿರುವ ಲುಕ್ ಅನ್ನು ಪುತ್ರಿ ಸಾನ್ವಿ ಪೆನ್ಸಿಲ್ ಸ್ಕೆಚ್ ಮಾಡಿ ಗಿಫ್ಟ್ ಕೊಟ್ಟಿದ್ದಾರೆ. ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಸಾನ್ವಿ ಸುದೀಪ್ ಡ್ರಾ ಮಾಡಿರುವ ಚಿತ್ರದ ಈ ಪೋಸ್ಟ್ ವೈರಲ್ ಆಗುತ್ತಿದೆ. ದೇಶಾದ್ಯಂತ 190ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಚ್ಚನ್ ಸಿನಿಮಾ ರಿಲೀಸ್ ಆಗಿತ್ತು, ಜರ್ಮನಿ ಸೇರಿದಂತೆ ವಿದೇಶಗಳಲ್ಲಿಯೂ ಅಬ್ಬರಿಸಿತ್ತು. ತೆಲುಗು, ತಮಿಳು, ಹಿಂದಿಗೂ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಸುದೀಪ್ 3 ಶೇಡ್ಗಳಲ್ಲಿ ನಟಿಸಿದ್ದಾರೆ.
ಮಗಳು ಬಿಡಿಸಿರುವ ಚಿತ್ರದ ಪೋಟೋವನ್ನು ಸುದೀಪ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೇವಲ 30 ನಿಮಿಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಲೈಕ್ಸ್ ಈ ಫೋಟೋಗೆ ಬಂದಿವೆ. ಅಭಿಮಾನಿಗಳು ಕಾಮೆಂಟ್ಸ್ ಮಾಡಿದ್ದಾರೆ. ಈ ಪೆನ್ಸಿಲ್ ಸ್ಕೆಚ್ ಅನ್ನು ಕಿಚ್ಚನ ಅಭಿಮಾನಿಗಳು ಸಹ ಅವರ ಫ್ಯಾನ್ ಪೇಜ್ಗಳಲ್ಲಿ ಶೇರ್ ಮಾಡಿದ್ದಾರೆ.