ಕೂಗು ನಿಮ್ಮದು ಧ್ವನಿ ನಮ್ಮದು

ಕಾಮಗಾರಿ ಹೆಸರಲ್ಲಿ ಗುಂಡಿ ತೋಡಿ ಮಣ್ಣನ್ನು ಅಲ್ಲೇ ಗುಡ್ಡೆ ಹಾಕುತ್ತಿರುವ ಬಿಬಿಎಂಪಿ, ಧೂಳಿನಿಂದ ಸವಾರರು ಪರದಾಟ

ಬೆಂಗಳೂರು ನಗರ ಅನೇಕ ಸಮಸ್ಯೆಗಳ ಆಗರವಾಗಿದೆ. ಲಕ್ಷಾಂತರ ಮಂದಿಗೆ ಜೀವನಾಧಾರವಾದ ಮಹಾನಗರದಲ್ಲಿ ಜನ ಪ್ರತಿದಿನ ಸಮಸ್ಯೆಗಳನ್ನು ಎದುರಿಸುತ್ತಲೇ ಬದುಕುಕಟ್ಟಿಕೊಳ್ಳಬೇಕಿದೆ. ಟ್ರಾಫಿಕ್ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಮನೆ ಹುಡುಕುವ ಸಮಸ್ಯೆ, ಬೆಲೆ ಏರಿಕೆ ಹೀಗೆ ಸಮಸ್ಯೆಗಳ ಸರ ಮಾಲೆಯೇ ಇದೆ. ಆದ್ರೆ ನಾವೀಗ ಹೇಳಲು ಹೊರಟಿರುವುದು ಚರಂಡಿ ಕ್ಲೀನ್ ಮಾಡಿದಾಗ ಈ ಕೊಳಕು ಕಸವನ್ನು ವಿಲೇವಾರಿ ಮಾಡದೇ ಅಲ್ಲೆ ಬಿಡುವುದರ ಬಗ್ಗೆ. ಬಿಬಿಎಂಪಿಯು ವಾರಗಟ್ಟಲೆ ರಸ್ತೆಬದಿಯಲ್ಲಿರುವ ಚರಂಡಿಗಳಿಂದ ತೆಗೆದ ಕೊಳಕು ತ್ಯಾಜ್ಯವನ್ನು ತೆರವು ಮಾಡದೇ ಅಲ್ಲಲ್ಲೇ ಬಿಡಲಾಗುತ್ತಿದೆ. ಹಾಘೂ ಕಾಮಗಾರಿಗಳಿಗಾಗಿ ಗುಂಡಿ ತೆಗೆದು ಮಣ್ಣನ್ನು ಗುಡ್ಡೆ ಹಾಕಲಾಗುತ್ತಿದೆ. ಇದರಿಂದ ಹಲವಾರು ನಗರಗಳು ಧೂಳಿನಿಂದ ಮಾರ್ಪಟ್ಟಿವೆ. ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.

ಕಾಮಗಾರಿ ಹೆಸರಲ್ಲಿ ಗುಂಡಿ ತೋಡಿ ಮಣ್ಣನ್ನು ಅಲ್ಲೇ ಗುಡ್ಡೆ ಹಾಕುತ್ತಿರುವ ಬಿಬಿಎಂಪಿ, ಧೂಳಿನಿಂದ ಸವಾರರು ಪರದಾಟ ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ವಾಹನಗಳು ಚಲಿಸುವಾಗ ನುಗ್ಗುವ ಧೂಳಿನಿಂದ ಅಂಗಡಿ ಮಾಲೀಕರು ಹಾಗೂ ನಿವಾಸಿಗಳು ಪರದಾಡುವಂತಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾಮಾನ್ಯವಾಗಿ ದಿನದ ಕೆಲಸ ಮುಗಿದ ನಂತರ ಚರಂಡಿಯಿಂದ ಹೊರತೆಗೆದ ತ್ಯಾಜ್ಯವನ್ನು, ಕಾಮಗಾರಿ ಮಾಡುವಾಗ ತೆಗೆದ ಮಣ್ಣನ್ನು ವಿಲೇವಾರಿ ಮಾಡದೆ ರಸ್ತೆ ಬದಿಯಲೇ ಗುಡ್ಡೆ ಹಾಕುತ್ತಿದೆ.

ಹೊರವರ್ತುಲ ರಸ್ತೆ, ಕಸವನಹಳ್ಳಿ ರಸ್ತೆ, ಸರ್ಜಾಪುರ ರಸ್ತೆ, ದೇವೇಗೌಡ ರಸ್ತೆ, ದಿನ್ನೂರು ಮುಖ್ಯರಸ್ತೆ, ಆರ್‌ಟಿ ನಗರ ಮುಖ್ಯರಸ್ತೆ, ರಾಚೇನಹಳ್ಳಿ ರಸ್ತೆ, ಥಣಿಸಂದ್ರ ರಸ್ತೆ, ಇಂದಿರಾನಗರ 12ನೇ ಮುಖ್ಯರಸ್ತೆ, ವಿದ್ಯಾರಣ್ಯಪುರ, ಹೊಸ ತಿಪ್ಪಸಂದ್ರ ಮತ್ತು ಹೆಚ್‌ಬಿಆರ್ ಲೇಔಟ್ಗಳಲ್ಲಿ ತ್ಯಾಜ್ಯಗಳನ್ನು ತೆರವುಗೊಳಿಸಿಲ್ಲ. ಒಟ್ಟು 4,000 ಕೋಟಿ ರೂ ವೆಚ್ಚದ ಬಿಬಿಎಂಪಿಯ ಮಹತ್ವಾಕಾಂಕ್ಷೆಯ ಬೃಹತ್ ಯೋಜನೆಯ ಭಾಗವಾಗಿ ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ನಗರವನ್ನು ಸ್ವಚ್ಛವಾಗಿ ಇಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಗಳು ನಗರದಾದ್ಯಂತ 2,500 ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ರಸ್ತೆ ಡಾಂಬರೀಕರಣ ಮತ್ತು ಫುಟ್‌ಪಾತ್ ಸುಧಾರಣೆಗಳನ್ನು ಒಳಗೊಂಡಿವೆ. ಆದಾಗ್ಯೂ, ಸಮಗ್ರ ಕಾರ್ಯವು ಮುಂದುವರೆದಂತೆ, ಇಡೀ ನಗರವು ಅಂದವನ್ನು ಕಳೆದುಕೊಂಡಿದೆ. ರಸ್ತೆಗೆ ಸಂಬಂಧಿಸಿದ ಕಾಮಗಾರಿಗಳು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ನಂತರ ಎಲ್ಲವೂ ಸರಿಯಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿಯು ತರಳಬಾಳು ರಸ್ತೆಯನ್ನು ವೈಟ್ ಟಾಪಿಂಗ್ ಮಾಡುತ್ತಿದೆ, ಆದರೆ ಪ್ರಗತಿ ನಿಧಾನವಾಗಿದೆ ಎಂದು ಆರ್‌ಟಿ ನಗರದ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು. ನನಗೆ ಧೂಳಿನಿಂದ ಅಲರ್ಜಿ ಇದೆ, ಆದರೆ ಮಾಲಿನ್ಯವನ್ನು ಹೊರಹಾಕದೆ ಹೇಗೆ ಕೆಲಸ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿಗೆ ತಿಳಿದಿಲ್ಲ. ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಅನುವು ಮಾಡಿಕೊಟ್ಟಿದೆ. ಇದರಿಂದ ಮಾಲಿನ್ಯ ಹೆಚ್ಚುತ್ತಿದೆ’ ಎಂದು ಹೇಳಿದರು.

error: Content is protected !!