ಬೆಳಗಾವಿ: ಮತದಾರರು ಈಗ ಮೊದಲಿನಂತಿಲ್ಲ, ಅವರನ್ನು ಬಕ್ರಾ ಮಾಡಲಾಗಲ್ಲ, ಎಚ್ಚೆತ್ತುಕೊಂಡಿದ್ದಾರೆ ಅಂತ ರಾಜಕೀಯ ನಾಯಕರಿಗೆ ಅರ್ಥವಾಗದಿರೋದು ದುರಂತವೇ. ಈ ವಿಡಿಯೋ ನೋಡಿ.
ಕಿತ್ತೂರು ಬಿಜೆಪಿ ಶಾಸಕ ಮಹಾಂತೇಶ್ ದೊಡ್ಡಗೌಡರ್ ಕ್ಷೇತ್ರದ ಚಿಕ್ಕಬಾಗೇವಾಡಿಗೆ ಮತ ಯಾಚಿಸಲು ಹೋದಾಗ ಜನ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ವೋಟು ಕೇಳಲು ಬಂದಿದ್ದೀರಲ್ಲ, ನಿಮಗೆ ಮಾನ ಮರ್ಯಾದೆ ಇಲ್ಲವೇ ಅಂತ ಒಬ್ಬ ಯುವಕ ಹಾಗೂ ಮಹಿಳೆಯರು ಶಾಸಕರಿಗೆ ನೀರಿಳಿಸಿದ್ದಾರೆ. ಶಾಸಕರ ಪರ ಮಾತಾಡಲು ಮುಂದಾದ ಬೆಂಬಲಿಗರು ಸಹ ಲೇವಡಿಗೊಳಗಾಗಿದ್ದಾರೆ. ಜಾಸ್ತಿ ಹೊತ್ತು ನಿಂತಿದ್ದರೆ ಉಳಿದ ಮಾನ ಕೂಡ ಮಣ್ಣುಪಾಲಾಗುತ್ತದೆ ಅಂತ ಮಹಾಂತೇಶ್ ದೊಡ್ಡಗೌಡರ್ ಅಲ್ಲಿಂದ ಕಾಲ್ಕಿತ್ತಿದ್ದಾರೆ.