ಕೂಗು ನಿಮ್ಮದು ಧ್ವನಿ ನಮ್ಮದು

ಗುಜರಾತ್‌ ಟೈಟನ್ಸ್ vs ಕೆಕೆಆರ್‌ ಪಂದ್ಯಕ್ಕೆ ಪ್ಲೇಯಿಂಗ್ XI ಮತ್ತು ಪಿಚ್‌ ರಿಪೋರ್ಟ್ ಹೀಗಿದೆ!

ಅಹಮದಾಬಾದ್ : ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ತವರಿನಂಗಳದಲ್ಲಿ ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ದಾಖಲಿಸಿದ್ದ ಡಿಫೆಂಡಿಂಗ್‌ ಚಾಂಪಿಯನ್ಸ್‌ ಗುಜರಾತ್ ಟೈಟನ್ಸ್, ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ 6 ವಿಕೆಟ್ ಗಳ ಜಯ ಗಳಿ ಆತ್ಮವಿಶ್ವಾಸದ ಅಲೆಯಲ್ಲಿದೆ. ಹೀಗಾಗಿ ಏಪ್ರಿಲ್ 9 (ಭಾನುವಾರ) ಮಧ್ಯಾಹ್ನ 3.30 ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ 2023 ಟೂರ್ನಿಯ 13ನೇ ಪಂದ್ಯದಲ್ಲಿ ಬಲಿಷ್ಠ ಕೆಕೆಆರ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಜಯದ ಕನವರಿಕೆಯಲ್ಲಿದೆ. ಅತ್ತ ಮೊದಲ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದಡಿ ಪಂಜಾಬ್ ಕಿಂಗ್ಸ್ ವಿರುದ್ಧ 7 ರನ್‌ಗಳ ಸೋಲು ಕಂಡು, ನಂತರ ಅಪಾಯಕಾರಿ ಆರ್‌ಸಿಬಿ ವಿರುದ್ಧ 81 ರನ್‌ಗಳ ಗೆಲುವು ದಾಖಲಿಸಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಜಯದ ಹಾದಿಯಲ್ಲಿ ಮುನ್ನಡೆಯಲು ಎದುರು ನೋಡುತ್ತಿದೆ.

ಮ್ಯಾಚ್‌ ವಿನ್ನರ್‌ಗಳ ಪಡೆ ಟೈಟನ್ಸ್‌
ಗುಜರಾತ್ ಟೈಟನ್ಸ್‌ ತಂಡದ ಯುವ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಬಲಿಷ್ಠ ಫಾರ್ಮ್ ನಲ್ಲಿದ್ದು, ಸಿಎಸ್‌ಕೆ ವಿರುದ್ಧ ಆಕರ್ಷಕ ಅರ್ಧಶತಕ ಕೂಡ ಸಿಡಿಸಿದ್ದಾರೆ. ಕೆಕೆಆರ್ ವಿರುದ್ಧವೂ ಮತ್ತೊಂದು ಸ್ಫೋಟಕ ಇನಿಂಗ್ಸ್ ಆಡಲು ಎದುರು ನೋಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ ಅವರಂತಹ ಮ್ಯಾಚ್‌ ವಿನ್ನರ್‌ಗಳ ಪಡೆಯನ್ನೇ ಟೈಟನ್ಸ್‌ ಹೊಂದಿದ್ದು, ಬ್ಯಾಟಿಂಗ್ ಲೈನ್ ಆಪ್ ಕೆಳ ಕ್ರಮಾಂಕದ ವರೆಗೂ ಬಲ ಪಡೆದುಕೊಂಡಿದೆ. ವಿಶ್ವದ ನಂ.1 ಟಿ 20 ಬೌಲರ್ ರಶೀದ್ ಖಾನ್ ಟೈಟನ್ಸ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದು, ವೇಗಿಗಳಾದ ಮೊಹಮ್ಮದ್ ಶಮಿ, ಅಲ್ಝಾರಿ ಜೋಸೆಫ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಕೆಕೆಆರ್ ತಂಡ ಬ್ಯಾಟಿಂಗ್ ಬಲ ಅಡಗಿಸುವ ಶಕ್ತಿ ಟೈಟನ್ಸ್‌ಗೆ ಇದೆ.

ಸುನೀಲ್ ನರೈನ್, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ ಟೈಟನ್ಸ್ ಬ್ಯಾಟಿಂಗ್ ಬಲದ ಎದುರು ಪ್ರಾಬಲ್ಯ ಮೆರೆಯುವ ಸಾಮರ್ಥ್ಯ ಹೊಂದಿದ್ದಾರೆ. ಉಮೇಶ್ ಯಾದವ್ ಹಾಗೂ ಟಿಮ್ ಸೌಥೀ ಅವರ ಅನುಭವದ ವೇಗದ ಬೌಲಿಂಗ್‌ ಬಲವು ತಂಡಕ್ಕಿದೆ. ಜೊತೆಗೆ ಆಲ್ ರೌಂಡರ್ ಶಾರ್ದುಲ್ ಠಾಕೂರ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೆ ನಾಯಕ ನಿತೀಶ್ ರಾಣಾ, ಆಂಡ್ರೂ ರಸೆಲ್, ವೆಂಕಟೇಶ್ ಅಯ್ಯರ್ ಅವರ ಬ್ಯಾಟ್ ಟೂರ್ನಿಯಲ್ಲಿ ಇನ್ನು ಸದ್ದು ಮಾಡಬೇಕಿದೆ. ರಿಂಕು ಸಿಂಗ್ ತಮ್ಮ ಎಂದಿನ ಬ್ಯಾಟಿಂಗ್ ಲಯವನ್ನು ಮುಂದುವರಿಸಿದರೆ, ಹೀಗಾಗಿ ಕೆಕೆಆರ್ ಸ್ಪರ್ಧಾತ್ಮಕ ಮೊತ್ತ ಗಳಿಸಿ ಟೈಟನ್ಸ್ ಬೌಲರ್ ಗಳ ಮೇಲೆ ಒತ್ತಡ ಹೇರಬಹುದು. ತವರಿನಂಗಳದಲ್ಲಿ ಆಡುತ್ತಿರುವುದರಿಂದ ಟೈಟನ್ಸ್ ಗೆ ಗೆಲುವಿನ ಅವಕಾಶ ಹೆಚ್ಚಾಗಿದೆ.

ಪಿಚ್ ರಿಪೋರ್ಟ್
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಪಿಚ್ ಹೊಂದಿದೆ. ಪಂದ್ಯ 40 ಓವರ್‌ಗಳವರೆಗೂ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ರನ್ ಗಳಿಸಬಹುದಾಗಿದ್ದು, ಹೈ-ಸ್ಕೋರಿಂಗ್ ಹಣಾಹಣಿ ನಿರೀಕ್ಷೆ ಮಾಡಬಹುದು. ಈ ಅಂಗಳದಲ್ಲಿ ಆಡಿರುವ ಕಳೆದ 3 ಪಂದ್ಯಗಳಲ್ಲೂ ಚೇಸಿಂಗ್ ಮಾಡಿರುವ ತಂಡವೇ ಗೆಲುವು ದಾಖಲಿಸಿದ್ದು, ಹೀಗಾಗೊ ಟಾಸ್ ಗೆಲ್ಲುವ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

error: Content is protected !!