ಬೆಂಗಳೂರು: ಮೇನಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಸಿದ್ದರಾಮಯ್ಯ ಕ್ಷೇತ್ರದ ಗೊಂದಲಕ್ಕೆ ಈ ಪಟ್ಟಿ ಪೂರ್ಣವಿರಾಮ ಹಾಕಿದೆ. ಮಾಜಿ ಮುಖ್ಯಮಂತ್ರಿ ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾದಿಂದಲೇ ಸ್ಪರ್ಧೆ ಮಾಡುತ್ತಿದ್ದಾರೆ.
ರಾಜಾಜಿನಗರದಲ್ಲಿ ಪುಟ್ಟಣ್ಣಗೆ ಟಿಕೆಟ್
ರಾಜಾಜಿನಗರದಲ್ಲಿ ಯಾರಿಗೆ ಟಿಕೆಟ್ ಕೊಡಲಿದ್ದಾರೆ ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಪುಟ್ಟಣ್ಣಗೆ ಟಿಕೆಟ್ ನೀಡಲಾಗಿದೆ. ರಾಜಾಜಿನಗರಕ್ಕೆ ಭವ್ಯ ನರಸಿಂಹ ಮೂರ್ತಿ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪುಟ್ಟಣ್ಣ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದೇವನಹಳ್ಳಿಯಲ್ಲಿ ಕೆ.ಎಚ್. ಮುನಿಯಪ್ಪ, ಮಹದೇವಪುರದಲ್ಲಿ ನಾಗೇಶ್!
ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಅವರ ರಾಜ್ಯ ರಾಜಕಾರಣಕ್ಕೆ ಮುನಿಯಪ್ಪ ಮರಳಿದ್ದಾರೆ. ಇನ್ನು ಇತ್ತೀಚೆಗಷ್ಟೇ ಕಾಂಗ್ರೆಸ್ಗೆ ಸೇರ್ಪಡೆಯಾದ ಪಕ್ಷೇತರ ಶಾಸಕ ಎಚ್. ನಾಗೇಶ್ಗೆ ಮಹದೇವಪುರದಲ್ಲಿ ಟಿಕೆಟ್ ನೀಡಲಾಗಿದೆ.
ಘೋಷಣೆ ಆಗದ ಕೋಲಾರ, ಬಾದಾಮಿ ಟಿಕೆಟ್
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಅವರು ವರುಣಾದಿಂದ ಸ್ಪರ್ಧಿಸುವುದು ಖಚಿತಪಟ್ಟಿದ್ದರೆ ಇನ್ನೊಂದು ಕ್ಷೇತ್ರ ಯಾವುದು ಎಂದು ಸ್ಪಷ್ಟವಾಗಿಲ್ಲ. ಸಿದ್ದರಾಮಯ್ಯ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಕೋಲಾರ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳ ಟಿಕೆಟ್ ಘೋಷಣೆ ಆಗಿಲ್ಲ.
ಮೊದಲ ಪಟ್ಟಿಯಲ್ಲಿ ಘೋಷಣೆಯಾಗಿಲ್ಲ ಕೆಲವು ಹಾಲಿ ಶಾಸಕರ ಹೆಸರು ಮೊದಲ ಪಟ್ಟಿಯಲ್ಲಿ ಕೆಲವು ಹಾಲಿ ಶಾಸಕರ ಹೆಸರು ಘೋಷಣೆ ಆಗಿಲ್ಲ. ಲಿಂಗಸಗೂರು ಶಾಸಕ ಡಿ.ಎಸ್. ಹೂಲಗೇರಿ, ಪುಲಕೇಶಿನಗರ ಶಾಸಕ
ಅಖಂಡ ಶ್ರೀನಿವಾಸ ಮೂರ್ತಿ, ಹಾಲಿ ಹರಿಹರ ಶಾಸಕ ರಾಮಪ್ಪ, ಶಿಡ್ಲಘಟ್ಟ ಶಾಸಕ ಮುನಿಯಪ್ಪ ಅವರಿಗೆ ಟಿಕೆಟ್ ಘೋಷಣೆ ಆಗಿಲ್ಲ. ಕುಂದಗೋಳದಲ್ಲಿ ಕುಸುಮಾ ಶಿವಳ್ಳಿಗೂ ಟಿಕೆಟ್ ಘೋಷಣೆಯಾಗಿಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಿಸಲಿದೆಯೇ ಎಂಬ ಕುತೂಹಲ ಹುಟ್ಟಿಕೊಂಡಿದೆ.
ಹಲವು ಯುವ ಮುಖಗಳಿಗೆ ಮಣೆ
ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ್ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ, ಮೂಡುಬಿದಿರೆಯಲ್ಲಿ ಹಲವು ಕಾಲದಿಂದ ಬೀಡುಬಿಟ್ಟಿರುವ ಮಿಥುನ್ ರೈಗೆ ಮಣೆ ಹಾಕಲಾಗಿದೆ. ಬೆಳ್ತಂಗಡಿಯಲ್ಲಿ ತೀವ್ರ ವಿರೋಧದ ನಡುವೆಯೂ ಬಿ.ಕೆ. ಹರಿಪ್ರಸಾದ್ ಸಂಬಂಧಿ ರಕ್ಷಿತ್ ಶಿವರಾಂಗೆ ಗಿಟ್ಟಿಸಿದ್ದಾರೆ
ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?
ಕ್ರ.ಸಂ. ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಅಭ್ಯರ್ಥಿ ಹೆಸರು
1 2 ಚಿಕ್ಕೋಡಿ-ಸದಲಗಾ ಗಣೇಶ್ ಹುಕ್ಕೇರಿ
2 4 ಕಾಗವಾಡ ಬರಮಗೌಡ ಅಲಗೌಡ ಕಾಗೆ
3 5 ಕುಡಚಿ ಎಸ್ಸಿ ಮಹೇಂದ್ರ ಕೆ ತಮ್ಮಣ್ಣನ್ನವರ್
4 7 ಹುಕ್ಕೇರಿ ಎ.ಬಿ, ಪಾಟೀಲ್
5 10 ಯಮಕನಮರಡಿ ಎಸ್ಟಿ ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ
6 13 ಬೆಳಗಾವಿ ಗ್ರಾಮಾಂತರ ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್
7 14 ಖಾನಪುರ ಡಾ. ಅಂಜಲಿ ನಿಂಬಾಳ್ಕರ್
8. 16 ಬೈಲಹೊಂಗಲ ಮಹಾಂತೇಶ್ ಶಿವಾನಂದ ಕೌಜಲಗಿ
9 18 ರಾಮದುರ್ಗ ಅಶೋಕ್ ಎಂ ಪಣ್ಣಣ
10. 21 ಜಮಖಂಡಿ ಆನಂದ ಸಿದ್ದು ನ್ಯಾಮಗೌಡ
11. 25 ಹುನಗುಂಡ ವಿಜಯಾನಂದ ಎಸ್ ಕಾಶಪ್ಪನವರ್
12. 26 ಮುದ್ದೇಬಿಹಾಳ ಅಪ್ಪಾಜಿ ಅಲಿಯಾಸ್ ಸಿಎಸ್ ನಾಡಗೌಡ
13. 28 ಬಸವನಬಾಗೇವಾಡಿ ಶಿವಾನಂದ ಪಾಟೀಲ್
14 29. ಬಬಲೇಶ್ವರ ಎಂ.ಬಿ. ಪಾಟೀಲ್
15. 32 ಇಂಡಿ ಯಶವಂತರಾಯಗೌಡ ವಿ ಪಾಟೀಲ್
16. 35 ಜೇವರ್ಗಿ ಡಾ. ಅಜಯ್ ಧರಂ ಸಿಂಗ್
17 36 ಶೋರಾಪುರ್ ಎಸ್ಟಿ ರಾಜಾವೆಂಕಟಪ್ಪ ನಾಯ್ಕ್
18. 37. ಶಹಾಪುರ್ ಶರಣಬಸಪ್ಪ ಗೌಡ
19 40. ಚಿತ್ತಾಪುರ ಎಸ್ಸಿ ಪ್ರಿಯಾಂಕ್ ಖರ್ಗೆ
20 41 ಸೇಡಂ ಡಾ. ಶರಣಪ್ರಕಾಶ್ ಪಾಟೀಲ್
21. 42 ಚಿಂಚೋಳಿ ಎಸ್ಸಿ ಸುಭಾಷ್ ವಿ ರಾಥೋಡ್
22 45 ಗುಲ್ಬರ್ಗಾ ಉತ್ತರ ಕನೀಝ್ ಫಾತೀಮಾ
23. 46 ಆಳಂದ ಬಿ.ಆರ್. ಪಾಟೀಲ್
24. 48. ಹುಮನಾಬಾದ್ ರಾಜಶೇಖರ್ ಬಿ ಪಾಟೀಲ್
25. 49. ಬೀದರ್ ದಕ್ಷಿಣ ಅಶೋಕ್ ಖೇಣಿ
26 50 ಬೀದರ್ ರಹೀಂ ಖಾನ್
27 51. ಭಾಲ್ಕಿ ಈಶ್ವರ್ ಖಂಡ್ರೆ
28 53 ರಾಯಚೂರು ಗ್ರಾಮಾಂತರ ಎಸ್ಟಿ ಬಸನಗೌಡ ದದ್ದಲ್
29. 59 ಮಸ್ಕಿ ಎಸ್ಟಿ ಬಸನಗೌಡ ತುರ್ವಿಹಾಳ್
30 60 ಕುಷ್ಟಗಿ ಅಮರೇಗೌಡ ಪಾಟೀಲ್ ಬಯ್ಯಾಪುರ
31. 61 ಕನಕಗಿರಿ ಎಸ್ಸಿ ಶಿವರಾಜ್ ಸಂಗಪ್ಪ ತಂಗಡಗಿ
32 63 ಯಲಬುರ್ಗಾ ಬಸವರಾಜ ರಾಯರೆಡ್ಡಿ
33. 64 ಕೊಪ್ಪಳ ಕೆ. ರಾಘವೇಂದ್ರ
34. 66 ಗದಗ ಎಚ್.ಕೆ. ಪಾಟೀಲ್
35 67 ರೋಣ. ಜಿ.ಎಸ್. ಪಾಟೀಲ್
36 72 ಹುಬ್ಬಳ್ಳಿ-ಧಾರವಾಡ- ಪೂರ್ವ-ಎಸ್ಸಿ ಪ್ರಸಾದ್ ಅಬ್ಬಯ್ಯ
37. 76 ಹಳಿಯಾಳ ಆರ್.ವಿ. ದೇಶಪಾಂಡೆ
38. 77 ಕಾರವಾರ ಸತೀಶ್ ಕೃಷ್ಣ ಸೈಲ್
39. 79 ಭಟ್ಕಳ ಮಂಕಾಳ ಸುಬ್ಬ ವೈದ್ಯ
40 82 ಹಾನಗಲ್ ಶ್ರೀನಿವಾಸ್ ವಿ ಮಾನೆ
41 84 ಹಾವೇರಿ ಎಸ್ಸಿ ರುದ್ರಪ್ಪ ಲಮಾಣಿ
42 85 ಬ್ಯಾಡಗಿ ಬಸವರಾಜ್ ಎನ್ ಶಿವಣ್ಣನರ್ 43. 86 ಹಿರೆಕೆರೂರು ಯು.ಬಿ. ಬಣಕಾರ್
44 87 ರಾಣೆಬೆನ್ನೂರು ಪ್ರಕಾಶ್ ಕೆ. ಕೋಳಿವಾಡ್
45 88 ಹಡಗಲಿ ಎಸ್ಸಿ ಪಿ.ಟಿ. ಪರಮೇಶ್ವರ ನಾಯ್ಕ್
46. 89 ಹಗರಿಬೊಮ್ಮನಹಳ್ಳಿ ಎಸ್ಸಿ ಎಲ್.ಬಿ.ಪಿ. ಭೀಮಾ ನಾಯ್ಕ್
47 90. ವಿಜಯನಗರ. ಎಚ್.ಆರ್. ಗವಿಯಪ್ಪ
48. 91 ಕಂಪ್ಲಿ ಎಸ್ಟಿ ಜೆ.ಎನ್. ಗಣೇಶ್
49 93. ಬಳ್ಳಾರಿ ಎಸ್ಟಿ ಬಿ. ನಾಗೇಂದ್ರ
50 95 ಸಂಡೂರು ಎಸ್ಟಿ ಈ. ತುಕಾರಾಮ್
51 98 ಚಳ್ಳಕೆರೆ ಎಸ್ಟಿ ಟಿ ರಘುಮೂರ್ತಿ
52. 100. ಹಿರಿಯೂರು ಡಿ. ಸುಧಾಕರ್
53 101 ಹೊಸದುರ್ಗ ಗೋವಿಂದಪ್ಪ ಬಿ.ಜಿ.
54. 106 ದಾವಣಗೆರೆ ಉತ್ತರ. ಎಸ್.ಎಸ್. ಮಲ್ಲಿಕಾರ್ಜುನ್
55. 107 ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ
56 108 ಮಾಯಕೊಂಡ. ಎಸ್ಸಿ ಕೆ.ಎಸ್. ಬಸವರಾಜು
57. 112 ಭದ್ರಾವತಿ ಸಂಗಮೇಶ್ವರ ಬಿ.ಕೆ.
58 116 ಸೊರಬ ಎಸ್ ಮಧು ಬಂಗಾರಪ್ಪ
59. 117 ಸಾಗರ. ಗೋಪಾಲಕೃಷ್ಣ ಬೇಲೂರು
60. 118 ಬೈಂದೂರು ಕೆ. ಗೋಪಾಲ ಪೂಜಾರಿ
61 119 ಕುಂದಾಪುರ ಎಂ.ದಿನೇಶ್ ಹೆಗ್ಡೆ
62 121 ಕಾಪು ವಿನಯ್ ಕುಮಾರ್ ಸೊರಕೆ
63. 123 ಶೃಂಗೇರಿ ಟಿ.ಡಿ. ರಾಜೇಗೌಡ
64 128 ಚಿಕ್ಕನಾಯಕನಹಳ್ಳಿ ಕಿರಣ್ ಕುಮಾರ್
65 129 ತಿಪಟೂರು ಕೆ. ಷಡಕ್ಷರಿ
66. 130 ತುರುವೇಕರೆ ಕಾಂತರಾಜ್ ಬಿ.ಎಂ.
67. 131 ಕುಣಿಗಲ್ ಡಾ.ಎಚ್.ಡಿ. ರಂಗನಾಥ್
68. 134 ಕೊರಟಗೆರೆ ಎಸ್ಸಿ ಡಾ. ಜಿ. ಪರಮೇಶ್ವರ
69 136 ಶಿರಾ ಟಿ.ಬಿ. ಜಯಚಂದ್ರ
70 137 ಪಾವಗಡ ಎಸ್ಸಿ ಎಚ್.ವಿ. ವೆಂಕಟೇಶ್
71 138 ಮಧುಗಿರಿ ಕೆ.ಎನ್. ರಾಜಣ್ಣ
72. 139 ಗೌರಿಬಿದನೂರು ಶಿವಶಂಕರ್ ರೆಡ್ಡಿ ಎನ್.ಎಚ್.
73 140 ಬಾಗೇಪಲ್ಲಿ ಎಸ್.ಎನ್.ಸುಬ್ಬಾ ರೆಡ್ಡಿ
74. 143 ಚಿಂತಾಮಣಿ ಡಾ.ಎಂ.ಸಿ. ಸುಧಾಕರ್
75. 144. ಶ್ರೀನಿವಾಸ್ಪುರ. ಕೆ.ಆರ್. ರಮೇಶ್ ಕುಮಾರ್
76 146 ಕೋಲಾರ. ಗೋಲ್ಡ್ ಫೀಲ್ಡ್ – ಎಸ್ಸಿ ರೂಪಕಲಾ ಎಂ ಶಶಿಧರ್
77 147 ಬಂಗಾರಪೇಟೆ ಎಸ್ಟಿ ಎಸ್.ಎನ್. ನಾರಾಯಣಸ್ವಾಮಿ
78. 149. ಮಾಲೂರು ಕೆ.ವೈ. ನಂಜೇಗೌಡ
79. 152 ಬ್ಯಾಟರಾಯನಪುರ ಕೃಷ್ಣಬೈರೇಗೌಡ
80 154 ರಾಜರಾಜೇಶ್ವರಿನಗರ. ಕುಸುಮ ಹನುಮಂತರಾಯಪ್ಪ
81 157 ಮಲ್ಲೇಶ್ವರಂ ಅನೂಪ್ ಅಯ್ಯಂಗಾರ್
82. 158 ಹೆಬ್ಬಾಳ ಸುರೇಶ್ ಬಿ.ಎಸ್. (ಬೈರತಿ)
83. 160. ಸರ್ವಜ್ಞನಗರ ಕೆ.ಜೆ. ಜಾರ್ಜ್
84 162. ಶಿವಾಜಿ ನಗರ ರಿಜ್ವಾನ್ ಅರ್ಷದ್
85 163 ಶಾಂತಿನಗರ ಎನ್.ಎ. ಹ್ಯಾರಿಸ್
86. 164 ಗಾಂಧಿ ನಗರ ದಿನೇಶ್ ಗುಂಡೂರಾವ್
87 165 ರಾಜಾಜಿನಗರ ಪುಟ್ಟಣ್ಣ
88 166 ಗೋವಿಂದರಾಜನಗರ. ಪ್ರಿಯ ಕೃಷ್ಣ
89 167. ವಿಜಯನಗರ ಎಂ. ಕೃಷ್ಣಪ್ಪ
90 168 ಚಾಮರಾಜಪೇಟೆ ಬಿ.ಝಡ್.ಜಮೀರ್ ಅಹಮದ್ ಖಾನ್
91 170 ಬಸವನಗುಡಿ ಯು.ಬಿ. ವೆಂಕಟೇಶ್
92. 172 ಬಿಟಿಎಂ ಲೇಔಟ್ ರಾಮಲಿಂಗಾ ರೆಡ್ಡಿ
93 173 ಜಯನಗರ ಸೌಮ್ಯ ರೆಡ್ಡಿ
93. 174 ಮಹಾದೇವಪುರ. ಎಸ್ಟಿ ನಾ ಗೇಶ್ ಟಿ
95. 177. ಆನೇಕಲ್ ಎಸ್ಸಿ ಬಿ. ಶಿವಣ್ಣ
96 178 ಹೊಸಕೋಟೆ ಶರತ್ ಬಚ್ಚೇಗೌಡ
97 179 ದೇವನಹಳ್ಳಿ ಎಸ್ಸಿ ಕೆ.ಎಚ್. ಮುನಿಯಪ್ಪ
98. 180 ದೊಡ್ಡಬಳ್ಳಾಪುರ. ಟಿ. ವೆಂಕಟರಾಮಯ್ಯ
99. 181. ನಲಮಂಗಲ. ಎಸ್ಸಿ ಶ್ರೀನಿವಾಸಯ್ಯ ಎನ್
100 182 ಮಾಗಡಿ ಎಚ್.ಸಿ. ಬಾಲಕೃಷ್ಣ
101 183 ರಾಮನಗರ ಇಕ್ಬಾಲ್ ಹುಸೇನ್ ಎಚ್.ಎ.
102 184. ಕನಕಪುರ ಡಿ.ಕೆ. ಶಿವಕುಮಾರ್
103 186. ಮಳವಳ್ಳಿ ಎಸ್ಸಿ ಪಿ.ಎಂ. ನರೇಂದ್ರಸ್ವಾಮಿ
104 190 ಶ್ರೀರಂಗಪಟ್ಟಣ ಎ.ಬಿ. ರಮೇಶ್ ಬಂಡಿಸಿದ್ದೇಗೌಡ
105 191 ನಾಗಮಂಗಲನ್. ಚಲುವರಾಯಸ್ವಾಮಿ
106 197. ಹೊಳೆನರಸೀಪುರ. ಶ್ರೇಯಸ್ ಎಂ ಪಟೇಲ್
107 199 ಸಕಲೇಶಪುರ. ಎಸ್ಸಿ ಮುರಳಿ ಮೋಹನ್
108. 200 ಬೆಳ್ತಂಗಡಿ ರಕ್ಷಿತ್ ಶಿವರಾಮ್
109. 201 ಮೂಡಬಿದ್ರೆ ಮಿಥುನ್ ಎಂ ರೈ
110 204 ಮಂಗಳೂರು (ಉಳ್ಳಾಲ) ಯುಟಿ ಅಬ್ದುಲ್ ಖಾದರ್ ಅಲಿ ಫರೀಸ್
111. 205. ಬಂಟ್ವಾಳ ರಮಾನಾಥ ರೈ ಬಿ.
112. 207 ಸುಳ್ಯ ಎಸ್ಸಿ ಕೃಷ್ಣಪ್ಪ ಜಿ.
113 209 ವಿರಾಜಪೇಟೆ ಎ.ಎಸ್. ಪೊನ್ನಣ್ಣ
114. 210 ಪಿರಿಯಾಪಟ್ಟಣ. ಕೆ. ವೆಂಕಟೇಶ್
115. 211. ಕೃಷ್ಣರಾಜನಗರ. ಡಿ. ರವಿಶಂಕರ್
116 212. ಹುಣಸೂರು ಎಚ್.ಪಿ. ಮಂಉನಾಥ್
117 213 ಹೆಗ್ಗಡದೇವನಕೋಟೆ ಎಸ್ಟಿ ಅನಿಲ್ ಕುಮಾರ್ ಸಿ
118 214 ನಂಜನಗೂಡು ಎಸ್ಸಿ ದರ್ಶನ್ ಧ್ರುವನಾರಾಯಣ್
119 218 ನರಸಿಂಹರಾಜ ತನ್ವೀರ್ ಸೇಠ್
120 219. ವರುಣ. ಸಿದ್ದರಾಮಯ್ಯ
121 220. ಟಿ. ನರಸೀಪುರ ಎಸ್ಸಿ ಎಚ್.ಸಿ. ಮಹದೇವಪ್ಪ
122. 221 ಹನೂರು ಆರ್. ನರೇಂದ್ರ
123 223 ಚಾಮರಾಜನಗರ. ಸಿ. ಪುಟ್ಟರಂಗಶೆಟ್ಟಿ
124 224 ಗುಂಡ್ಲುಪೇಟೆ ಕೆ.ಎಂ. ಗಣೇಶ್ ಪ್ರಸಾದ್