ಕಬ್ಜ’ ಸಿನಿಮಾ ರಿಲೀಸ್ಗೆ ಕ್ಷಣಗಣನೆ ಆರಂಭ ಆಗಿದೆ. ಮಾರ್ಚ್ 17ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ‘ಕಬ್ಜ’ ಸಿನಿಮಾದ ಟ್ರೇಲರ್ ಸದ್ದು ಮಾಡಿದೆ. ಮೇಕಿಂಗ್ ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್ಕುಮಾರ್ ನಟಿಸಿದ್ದಾರೆ. ಈ ಕಾರಣಕ್ಕೂ ಸಿನಿಮಾ ಹೆಚ್ಚು ಹೈಪ್ ಸೃಷ್ಟಿಸಿಕೊಂಡಿದೆ. ಸದ್ಯ ತಂಡ ತಿರುಪತಿಗೆ ತೆರಳಿದೆ. ಕೆ.ಪಿ. ಶ್ರೀಕಾಂತ್, ಆರ್. ಚಂದ್ರು, ಉಪೇಂದ್ರ ಹಾಗೂ ಮೊದಲಾದವರು ಪ್ರೈವೇಟ್ ಜೆಟ್ನಲ್ಲಿ ತಿರುಪತಿಗೆ ತೆರಳಿದ್ದಾರೆ. ಈ ಫೋಟೋಗಳನ್ನು ತಂಡ ಹಂಚಿಕೊಂಡಿದೆ.
ಇಂದು (ಮಾರ್ಚ್ 16) ಮುಂಜಾನೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ತಂಡ ತಿರುಪತಿಗೆ ಪ್ರಯಾಣ ಬೆಳೆಸಿದೆ. ‘ಕಬ್ಜ’ ಸಿನಿಮಾ 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಬುಕಿಂಗ್ ಕೂಡ ಜೋರಾಗಿದೆ. ಸಿನಿಮಾಗೆ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.