ಕೂಗು ನಿಮ್ಮದು ಧ್ವನಿ ನಮ್ಮದು

ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಜಗ್ಗೇಶ್; ಇಲ್ಲಿದೆ ಫೋಟೋ ಗ್ಯಾಲರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಜಗ್ಗೇಶ್ ಈ ಹಿಂದೆ ಭೇಟಿ ಆಗಿದ್ದುಂಟು. ಆದರೆ ಈ ಬಾರಿ ಅವರು ತಮ್ಮ ಕುಟುಂಬದ ಸದಸ್ಯರ ಜೊತೆ ಭೇಟಿ ಮಾಡಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಜಗ್ಗೇಶ್ ಪತ್ನಿ ಪರಿಮಳಾ, ಪುತ್ರ ಯತಿರಾಜ್ ಅವರಿಗೆ ನರೇಂದ್ರ ಮೋದಿ ಜೊತೆ ಕೆಲವು ನಿಮಿಷಗಳ ಕಾಲ ಸಮಯ ಕಳೆಯುವ ಅವಕಾಶ ಸಿಕ್ಕಿದೆ. ಈ ಹೆಮ್ಮೆಯ ಕ್ಷಣದ ಬಗ್ಗೆ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ಜಗ್ಗೇಶ್ ಅವರು ಮೋದಿಗೆ ರಾಘವೇಂದ್ರ ಸ್ವಾಮಿಗಳ ವಿಗ್ರಹವನ್ನು ನೀಡಿದ್ದಾರೆ. ಜೊತೆಗೆ ಸ್ವಾಮಿಗಳ ಮಹಿಮೆಯನ್ನೂ ವಿವರಿಸಿದ್ದಾರೆ. ಇಷ್ಟೆಲ್ಲ ಸಾಧ್ಯವಾಗಿದ್ದು ರಾಯರ ಕೃಪೆಯಿಂದಲೇ ಎಂದು ಅವರು ತಿಳಿಸಿದ್ದಾರೆ. ಮಾರ್ಚ್ 17ರಂದು ಜಗ್ಗೇಶ್ ಅವರ ಜನ್ಮದಿನ. 60ನೇಕುಟುಂಬ ಸಮೇತರಾಗಿ ಪ್ರಧಾನಿ ಮೋದಿ ಭೇಟಿ ಮಾಡಿದ ಜಗ್ಗೇಶ್; ಇಲ್ಲಿದೆ ಫೋಟೋ ಗ್ಯಾಲರಿ ವಸಂತಕ್ಕೆ ಅವರು ಕಾಲಿಡುತ್ತಿದ್ದಾರೆ. ಆ ಪ್ರಯುಕ್ತ ಮೋದಿ ಅವರಿಂದ ಮುಂಚಿತವಾಗಿಯೇ ಜಗ್ಗೇಶ್ಗೆ ಶುಭಾಶಯ ಸಿಕ್ಕಿದೆ. ‘ವಿಶ್ವ ಮೆಚ್ಚಿದ ನಾಯಕನಿಂದ ಆಶೀರ್ವಾದ, ಮಾರ್ಗದರ್ಶನ ಪಡೆದು ಪುನೀತನಾದೆ’ ಎಂದು ಜಗ್ಗೇಶ್ ಹೇಳಿದ್ದಾರೆ. ಜಗ್ಗೇಶ್ ಅವರು ಸಿನಿಮಾಗಳ ಜೊತೆಗೆ ರಾಜಕೀಯದಲ್ಲೂ ಸಕ್ರಿಯವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಫೂರ್ತಿ ಮತ್ತು ಮಾದರಿಯಾಗಿ ಇಟ್ಟುಕೊಂಡು ಜಗ್ಗೇಶ್ ಮುಂದುವರಿಯುತ್ತಿದ್ದಾರೆ

error: Content is protected !!