ಕೂಗು ನಿಮ್ಮದು ಧ್ವನಿ ನಮ್ಮದು

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಿಗೆæ ಸರ್ಕಾರಗಳ ವಿಫಲ

ಹೊನ್ನಾಳಿ: ವೀರಶೈವ ಪಂಚಮಸಾಲಿ ಸಮಾಜ ಕಳೆದ 29 ವರ್ಷಗಳಿದ 2ಎ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಾ ಸುಮಾರು 12 ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಲೇ ಬರುತ್ತಿದೆ. ಆದಾಗ್ಯೂ ಕೂಡ ಆಳುವ ಸರ್ಕಾರಗಳು ಇದುವರೆಗೆ ಯಾವುದೇ ಸ್ಪಷ್ಟಭರವಸೆ ನೀಡುವಲ್ಲಿ ವಿಫಲವಾಗಿವೆ ಎಂದು ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಲೋಕೇಶ್‌ ಹೇಳಿದರು. ಅವರ ಉತ್ತರವಾಗಿ ಮಾತನಾಡಿದರು ಹೊನ್ನಾಳಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರ ರಾಣಿ ಕಿತ್ತೂರು ಚೆನ್ನಮ್ಮ ಅವರ 199ನೇ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಮ್ಮ ಸಮಾಜದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅಂದು ಕಪ್ಪ ಕೇಳಿದ ಬ್ರಿಟಿಷ್‌ ಅಧಿಕಾರಿಗಳಿಗೆ ಉತ್ತರವಾಗಿ ನೀಡಿದ ಸ್ವಾಭಿಮಾನದ ಕಿಚ್ಚಿನ ಮಾತುಗಳು ಇಂದಿಗೂ ಕೂಡ ಪ್ರತಿಧ್ವನಿಸುತ್ತಿದೆ. ಸಂಗೋಳ್ಳಿ ರಾಯಣ್ಣ ಸೇರಿದಂತೆ ಇತರೆ ಎಲ್ಲಾ ಜನಾಂಗೀಯ ದೇಶ ಭಕ್ತ ಸೇನಾನಿಗಳನ್ನು ಸೇರಿಸಿಕೊಂಡು ನಡೆಸಿದ ಹೋರಾಟ ತ್ಯಾಗ ಬಲಿದಾನಗಳು ಎಂದಿಗೂ ಅಜರಾಮರವಾಗಿದ್ದು ಸ್ವಾಭಿಮಾನಿ ಬದುಕಿಗೆ ದಾರಿದೀಪವಾಗಿದೆ ಎಂದು ಹೇಳಿದರು.

ಪಂಚಮಸಾಲಿ ಸಮಾಜದ ಸಂಘಟನೆ ಮತ್ತು ಹಿತಾಸಕ್ತಿಗಳಿಗಾಗಿ ನಡೆಸಿ ಹೋರಾಟಗಳು ಹೊನ್ನಾಳಿ ತಾಲೂಕಿನಿದಲೇ ಆರಂಭಗೊಂಡಿರುವುದು ತಾಲೂಕಿನ ಸಮಾಜಬಾಂಧವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಶಿಕ್ಷಕ ಕೆ.ವಿ. ಪ್ರಸನ್ನ ಅವರು ಕಿತ್ತೂರು ರಾಣಿ ಚನ್ನಮ್ಮನವರ ಬದುಕು ಮತ್ತು ಹೊರಾಟಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾದ ಪಂಚಮಸಾಲಿ ತಾಲೂಕು ಘಟದ ಗೌರವಾಧ್ಯಕ್ಷ ಡಾ.ರಾಜ್‌ಕುಮಾರ್‌, ರಾಜ್ಯ ವೀರಶೈವ ಪಂಚಮಸಾಲಿ ಸಮಾಜದ ಉಪಾಧ್ಯಕ್ಷ ಪರಮೇಶ್‌ ಪಟ್ಟಣಶೆಟ್ಟಿ, ದಾವಣಗೆರೆ ಪಂಚಮಸಾಲಿ ನೌಕರರ ಸಂಘದ ಅಧ್ಯಕ್ಷ ಶ್ರೀಧರ್‌ ಅವರು ಮಾತನಾಡಿದರು. ಸಮಾರಂಭದಲ್ಲಿ 2022-23 ನೇ ಸಾಲಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಶಿಕ್ಷಕಿ ಶೋಭಾ ರೇಣುಕಪ್ಪ ಅವರಿಗೆ ಪ್ರಧಾನ ಮಾಡಲಾಯಿತು.

ವೀರಶೈವ ಪಂಚಾಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ಪಿ. ವೀರಪ್ಪ ಪಟ್ಟಣಶೆಟ್ಟಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಎಚ್‌.ಬಿ. ಆಶೋಕ ಅವರು ಸಮಾಜದ ಕಾರ್ಯಕ್ರಮಗಳು, ಹೋರಾಟಗಳ ಹಾದಿಯ ಬಗ್ಗೆ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.

error: Content is protected !!