ಕೂಗು ನಿಮ್ಮದು ಧ್ವನಿ ನಮ್ಮದು

12 ದಿನಗಳ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಶಾಸ್ತ್ರೋಕ್ತ ತೆರೆ

ಹಾಸನ: ವರ್ಷಕ್ಕೊಮ್ಮೆಯಷ್ಟೇ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ಇಂದು ಶಾಸ್ತ್ರೋಕ್ತ ತೆರೆ ಬಿದ್ದಿತ್ತು. ಇಂದು ಮಧ್ಯಾಹ್ನ 1.31ಕ್ಕೆ ಎಲ್ಲರ ಸಮ್ಮುಖದಲ್ಲಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಈ ವೇಳೆ ಹಾಜರಿದ್ದ ನೂರಾರು ಭಕ್ತರು, ಹಾಸನಾಂಬೆಗೆ ಜಯಘೋಷ ಮೊಳಗಿಸಿದರು. ಅಂತಿಮ ದಿನದ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಿದ್ದರಿಂದ ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡಲಾಯಿತು. ಈ ಮೂಲಕ ಕೊರೊನಾ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 5 ರಿಂದ ಇಂದಿನವರೆಗೆ ದರ್ಶನ ನೀಡಿದ ಹಾಸನಾಂಬೆ, ಮತ್ತೆ ಒಂದು ವರ್ಷಗಳ ಕಾಲ ಮರೆಗೆ ಸರಿದಳು.

ಈ ವೇಳೆ ಮಾತನಾಡಿದ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸರಳ ಉತ್ಸವಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದರು. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ನಡೆದ ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ಇಂದು ಸಾಂಪ್ರದಾಯಿಕ ತೆರೆಬಿದ್ದಿತು. ಬಲಿಪಾಡ್ಯಮಿ ದಿನ ಮಧ್ಯಾಹ್ನ 1.31ಕ್ಕೆ ಸರಿಯಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಈ ವೇಳೆ ಹಾಜರಿದ್ದ ಭಕ್ತರು, ಹಾಸನಾಂಬೆಗೆ ಜಯಘೋಷ ಮೊಳಗಿಸಿದರು. ಬಾಗಿಲು ಮುಚ್ಚುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಜಿಲ್ಲಾಡಳಿತದ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಮಾತನಾಡಿದ ಸಚಿವ ಗೋಪಾಲಯ್ಯ, ಕಳೆದ ನವೆಂಬರ್ 5 ರಿಂದ ನಡೆದ ಹಾಸನಾಂಬೆ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಇಂದು ಯಶಸ್ವಿಯಾಗಿ ಸಮಾಪ್ತಿಗೊಂಡಿದೆ.

ದೇವಾಲಯದ ಅರ್ಚಕರ ತೀರ್ಮಾನದಂತೆ ಇಂದು ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಜಾತ್ರಾ ಮಹೋತ್ಸವ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇದಕ್ಕಾಗಿ ಸರ್ಕಾರದ ಪರವಾಗಿ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು. ಇದೇ ವೇಳೆ ಜಿಲ್ಲೆ, ರಾಜ್ಯದಲ್ಲಿ ಆತಂಕ ಉಂಟು ಮಾಡಿರುವ ಕೊರೊನಾ ಮಹಾಮಾರಿ ಶೀಘ್ರವೇ ದೂರವಾಗಲಿ ಎಂದು ಪ್ರಾರ್ಥಿಸಿರುವುದಾಗಿ ಗೋಪಾಲಯ್ಯ ಹೇಳಿದರು. ಕೊರೊನಾ ಆತಂಕದ ನಡುವೆಯೂ ಹಾಸನಾಂಬೆ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಡೆದಿದೆ. ಶಾಂತಿಯುತ ಉತ್ಸವಕ್ಕೆ ಸಹಕಾರ ನೀಡಿದ ಎಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಧನ್ಯವಾದ ಹೇಳಿದರು. ಕೊರೊನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಆನ್ ಲೈನ್ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. 8 ಲಕ್ಷಕ್ಕೂ ಅಧಿಕ ಮಂದಿ ಆನ್ ಲೈನ್ ಮೂಲಕ ದರ್ಶನ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಸಾರ್ವಜನಿಕ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿತ್ತು. ಒಟ್ಟಾರೆಯಾಗಿ ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವ ಸರಳವಾಗಿ ನಡೆದರೂ, ಸುಸೂತ್ರವಾಗಿ ಸಂಪನ್ನಗೊಂಡಿದೆ.

ಕೊರೊನಾ ಆತಂಕ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತಾದರೂ, ವಿಶೇಷ ಆಹ್ವಾನಿತರು, ಗಣ್ಯರು ಸೇರಿದಂತೆ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ದೇವಿಯ ದರ್ಶನ ಪಡೆದಿದ್ದಾರೆ. ಕೊರೊನಾ ಕಾರಣದಿಂದ ದರ್ಶನಾವಕಾಶ ಇಲ್ಲ ಎಂದುಕೊಂಡು ದೂರ ಉಳಿದವರಿಗೆ ನಿರಾಸೆಯಾಗಿದ್ದರೆ, ಅವಕಾಶ ಸಿಕ್ಕ ಜನರು ಸಹಜವಾಗಿಯೇ ಸಂತಸ ಪಟ್ಟರು. ಒಟ್ಟಿನಲ್ಲಿ ಹಾಸನಾಂಬೆ ದೇವಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನಜಂಗುಳಿ, ಗದ್ದಲ ಇಲ್ಲದೆ ಹಾಸನಾಂಬೆಯ 12 ದಿನಗಳ ಜಾತ್ರಾ ಮಹೋತ್ಸವಕ್ಕೆ ಇಂದು ನಿರ್ವಿಘ್ನವಾಗಿ ತೆರೆ ಬಿದ್ದಿತ್ತು. ಮುಂದಿನ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವದ ದಿನಾಂಕವನ್ನು ಪಂಚಾಂಗ ನೋಡಿ ತಿಳಿಸಲಾಗುವುದು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!