ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಯಾಗಿ ಓರ್ವ ಮೀನುಗಾರ ಸಮುದ್ರ ಪಾಲಾಗಿರುವ ಘಟನೆ ಹೊನ್ನಾವರದ ಕಾಸರಕೋಡ ಬಳಿ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಗ್ರಾಮದ ತನ್ವೀರ್ (22) ಕಣ್ಮರೆಯಾಗಿರುವ ಮೀನುಗಾರನಾಗಿದ್ದು, ಶೋಧಕಾರ್ಯ ನಡೆದಿದೆ. ಐದು ಮಂದಿಯ ತಂಡ ಎರಡು ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ಸಮಯದಲ್ಲಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಅಲೆಗಳ ಅಬ್ಬರಕ್ಕೆ ಮೀನುಗಾರಿಕೆ ದೋಣಿ ಪಲ್ಟಿಯಾಗಿದೆ. ಇನ್ನು ನಾಪತ್ತೆಯಾದ ಮೀನುಗಾರನಿಗಾಗಿ ಸ್ಥಳಿಯ ಮೀನುಗಾರರು ಸೇರಿದಂತೆ ಪೊಲೀಸರು ಹುಡುಕಾಟ ಆರಂಭಿಸಿದ್ದು, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.