ಬೆಳಗಾವಿ: ದೇಶಾದ್ಯಂತ ಲಾಕಡೌನ್ ಇದೆ. ಇದನ್ನ ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸುವಂತೆ ಗೋಗರಿಲಾಗ್ತಿದೆ. ಹೀಗಿರುವಾಗ ಬೆಳಗಾವಿಯಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬ ಬೇಕಾಬಿಟ್ಟೆ ಓಡಾಡಿದಕ್ಕೆ ಸಕತ್ ಕ್ಲಾಸ್ ಗೆ ಒಳಗಾಗಿದ್ದಾನೆ. ಆತನಿಗೆ ಮಾಳಮಾರುತಿ ಪೊಲೀಸ್ ಠಾಣೆ ಸಿಪಿಐ ಬಿ.ಆರ್.ಗಡ್ಡೇಕರ, ಖಡಕ್ ವಾರ್ನಿಂಗ್ ನೀಡಿದ್ದಾರೆ. ಬೆಳಗಾವಿಯ ಶ್ರೀನಗರದಲ್ಲಿ ವಿದೇಶದಿಂದ ಬಂದಿದ್ದ ವ್ಯಕ್ತಿಗೆ ಹೋಮ್ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಆದ್ರೆ ಆತ ಹೋಮ್ ಕ್ವಾರಂಟೈನ್ ಇದ್ದರೂ ನಾಯಿ ತೆಗೆದುಕೊಂಡು ವಾಕಿಂಗ್ ಹೋಗಿದ್ದಾನೆ. ಈ ವಿಚಾರವನ್ನ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ. ಹೋಮ್ ಕ್ವಾರಂಟೈನ್ ಪಾಲಿಸದವನ ಮನೆಗೆ ಹೋಗಿ ಸಿಪಿಐ ಬಿ.ಆರ್.ಗಡ್ಡೇಕರ ಎಚ್ಚರಿಕೆ ನೀಡಿದ್ದಾರೆ. ಹೋಮ್ ಕ್ವಾರಂಟೈನ್ ಪಾಲಿಸದಿದ್ರೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಾಸ್ಕ್ ಇಲ್ಲದೇ ಮನೆಯಿಂದ ಹೊರಗೆ ಬಂಧನವನ ಚಳಿ ಬಿಡಿಸಿದ್ದಾರೆ. ಇನ್ನು ಮನೆಯಲ್ಲೂ ರೂಮ್ ಬಿಟ್ಟು ಹೊರಗೆ ಬರದಂತೆ ವಾರ್ನಿಂಗ್ ನೀಡಿರುವ ಸಿಪಿಐ ಬಿ.ಆರ್.ಗಡ್ಡೆಕರ್, ನಿನ್ನಿಂದ ನಿಮ್ಮ ಮಕ್ಕಳು, ಕುಟುಂಬ ಹಾಗೂ ಸಾರ್ವಜನಿಕರು ತೊಂದರೆ ಒಳಗಾಗಬಾರದು. ಇದೇ ಕೊನೆಯ ವಾರ್ನಿಂಗ್ ಮುಲಾಜಿಲ್ಲದೇ ಕೇಸ್ ಜಡಿಯುವುದಾಗಿ ಹೇಳಿ ಬಂದಿದ್ದಾರೆ. ಇನ್ನು ಈತನಿಗೆ ಹೋಮ್ ಕ್ವಾರಂಟೈನ್ ಗೆ ಸೂಚಿಸಿದ್ದರು ವಿದೇಶದಿಂದ ಬಂದವರು ಬಿಂದಾಸಾಗಿ ಓಡಾಟ ನಡೆಸುತ್ತಿರುವುದು, ಬೆಳಗಾವಿ ಜನರಲ್ಲಿ ಆತಂಕ ಹೆಚ್ಚಿಸಿದೆ.