ಕೂಗು ನಿಮ್ಮದು ಧ್ವನಿ ನಮ್ಮದು

ಹುಕ್ಕೇರಿಯ ಅರ್ಜುನವಾಡದಲ್ಲಿ ಮಹಾನಾಯಕ ನಾಮಫಲಕ ಉದ್ಘಾಟನೆ

ಹುಕ್ಕೇರಿ: ಹುಕ್ಕೇರಿ ತಾಲೂಕಿನ ಯಮಕನಮರ್ಡಿ ವಿಧಾನಸಭಾ ವ್ಯಾಪ್ತಿಯ ಅರ್ಜುನವಾಡ ಗ್ರಾಮದಲ್ಲಿ ಇಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ ರವರ ಜೀವನದ ಬಗ್ಗೆ ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ ಮಹಾನಾಯಕ ನಾಮಫಲಕವನ್ನು ಉದ್ಘಾಟನೆ ಮಾಡಲಾಯಿತು.

ಡಾ.ಬಾಬಾಸಾಹೇಬರು ಹಾಕಿಕೊಟ್ಟ ರೂಪು ರೇಷೆಗಳನ್ನೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಏಳಿಗೆಗಾಗಿ ನಿಸ್ವಾರ್ಥಿಯಾಗಿ ಕೆಲಸಮಾಡುವಂತೆ ಹೇಳಿ ನಾಯಕರೆಲ್ಲರೂ ಸೇರಿ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಾರುತಿ ಅಷ್ಟಗಿ ಸೇರಿದಂತೆ ಅರ್ಜುನವಾಡ ಗ್ರಾಮದ ಹಿರಿಯರು, ಯುವಕರು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.

error: Content is protected !!