ಬೆಳಗಾವಿ: ಬೆಳಗಾವಿಯಲ್ಲಿ ಸುರೇಶ ಅಂಗಡಿ ನಿವಾಸಕ್ಕೆ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿ, ಅಂಗಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಸಚಿವ ರಮೇಶ ಜಾರಕಿಹೊಳಿ ಮಾದ್ಯಮ ಹೇಳಿಕೆ ನೀಡಿ, ಜಗದೀಶ್ ಶೆಟ್ಟರ್, ಸುರೇಶ ಅಂಗಡಿ ಹಾಗೂ ನಾನು ಒಂದು ಶಕ್ತಿಯಾಗಿದ್ವಿ ಎಂದಿದ್ದಾರೆ. ಸಹೋದರಿ ಮಂಗಳ ನಮ್ಮ ಮನೆಯಲ್ಲಿ ಬೆಳೆದಿದ್ದಾರೆ. ಅಂಗಡಿ ಅಗಲಿಕೆ ವೈಯಕ್ತಿಕವಾಗಿ ರಮೇಶ ಜಾರಕಿಹೊಳಿಗೆ ದೊಡ್ಡ ನಷ್ಟ ಆಗಿದೆ. ಸುರೇಶ ಅಂಗಡಿ ಉನ್ನತ ಸ್ಥಾನಕ್ಕೆ ಹೋಗುತ್ತಿದ್ದಾರೆ. ಅವರ ಧರ್ಮಪತ್ನಿ, ತಾಯಿಗೆ ದೈರ್ಯವನ್ನು ಹೇಳಿದ್ದೇನೆ. ಇನ್ನು ಸುರೇಶ ಅಂಗಡಿ ಪಾರ್ಥಿವ ಶರೀರ ಬೆಳಗಾವಿಗೆ ತರದೇ ಇರೋ ವಿಷಯ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹೇಳಿಕೆ ವಿಚಾರವಾಗಿ ಪ್ರಸ್ತಾಪಿಸಿದ ಸಾಹುಕಾರ, ಈ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಅವನಿಗೆ ಎಂದು ಕಿಡಿಕಾರಿದ್ದಾರೆ. ಬೆಳಗಾವಿ ಜಿಲ್ಲೆಯ ಜನರು ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದೆ. ಇನ್ನು ಸುರೇಶ ಅಂಗಡಿ ಬದುಕಿದ್ರೆ ಸಿಎಂ ಆಗುತ್ತಿದ್ರು ಎಂಬ ಸುರೇಶ ಅಂಗಡಿ ಮಾವ ಲಿಂಗರಾಜ ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿದ ಸಚಿವರು ಈ ಬಗ್ಗೆ ಚರ್ಚೆ ಬೇಡ, ಸಮಯ ಬಂದಾಗ ನಾನೇ ಹೇಳುತ್ತೇನೆ ಎನ್ನುವ ಮೂಲಕ ಈ ವಿಷಯ ಅವರಿಗೂ ಗೊತ್ತಿತ್ತಾ..? ಅನ್ನೊ ಸಂದೇಹ ಹುಟ್ಟುಹಾಕಿದ್ದಾರೆ.