ಹುಬ್ಬಳ್ಳಿ: ಡ್ರಗ್ಸ್ ಜಾಲದಲ್ಲಿ ಯಾರೇ ಇದ್ರೂ ಕಠಿಣ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಜಾಲದಲ್ಲಿ ದೊಡ್ಡವರು, ಸಣ್ಣವರು ಅನ್ನೋದು ಬೇಡ. ಯಾರೇ ರಾಜಕೀಯ ನಾಯಕರು ಇದ್ರು ಕ್ರಮ ಕೈಗೊಳ್ಳಲಿ ಎಂದು ಹುಬ್ಬಳ್ಳಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಜಮೀರ ಅಹ್ಮದ ವಿರುದ್ದ ಸಾಕ್ಷ್ಯ ಇದ್ರೆ ಗಲ್ಲಿಗೆ ಏರಿಸಲಿ, ಅವರ ಆಸ್ತಿ ಎಲ್ಲಾ ಮುಟ್ಟುಗೋಲು ಹಾಕಿಕೊಳ್ಳಲಿ. ಅದೂ ಬಿಟ್ಟು ರಾಜಕೀಯವಾಗಿ ಮುಗಿಸಲು ಆರೋಪ ಮಾಡಬಾರದು ಎಂದರುವ ಸಿದ್ದರಾಮಯ್ಯ, ಸಾಕ್ಷ್ಯ ಸಿಕ್ಕರೆ ಕ್ರಮ ಕೈಗೊಳ್ಳಲಿ, ಸಂಬರಗಿ ಹೇಳಿದ್ರು ಅಂತಾ ತನಿಖೆ ಮಾಡೋಕೆ ಆಗುತ್ತಾ..? ಸಾಕ್ಷ್ಯ ಇದ್ರೆ ಯಾರನ್ನಾದ್ರು ತನಿಖೆ ಮಾಡಲಿ ಎಂದಿರುವ ಅವರು
ಇದೇ ಸಂದರ್ಭದಲ್ಲಿ ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರನಿಗೆ ನೋಟಿಸ್ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿ, ಅನಗತ್ಯವಾಗಿ ಸಿಬಿಐ ವಿಚಾರಣೆ ಮಾಡುತ್ತಿದ್ದಾರೆ. ತನಿಖೆ ಮಾಡಲಿ. ಆದ್ರೆ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಬರ-ನೆರೆ ಪ್ರವಾಹ ಪರಿಹಾರ ಇನ್ನೂ ಕೊಟ್ಟಿಲ್ಲ. 25 ಜನ ಸಂಸದರು ಇದ್ರು ಯಾರಿಗೂ ಕೇಂದ್ರ ಸರ್ಕಾರವನ್ನ ಕೇಳೋಕೆ ಧಮ್ ಇಲ್ಲ. ಕಳೆದ ವರ್ಷ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಆದ್ರೆ ಈರೆಗೂ ಪರಿಹಾರ ನೀಡಿಲ್ಲ. ಮನೆ ಬಿದ್ದವರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಆನೆ ಹೊಟ್ಟೆಗೆ ಮೂರು ಕಾಸು ಅಲ್ಲ, ಆರು ಕಾಸಿನ ಮಜ್ಜಿಗೆ ನೀಡಿದಂತೆ ಪರಿಹಾರ ನೀಡಿದ್ದಾರೆ. ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವೈಫಲ್ಯ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಚರ್ಚೆ ನಡೆಸುತ್ತೇವೆ. ಮೂರು ವಾರಗಳ ಕಾಲ ಅಧಿವೇಶನ ನಡೆಸಲಿ ಅಂತಾ ನಾನು ಸಿಎಂ ಬಿಎಸ್ ವೈ ಗೆ ಪತ್ರ ಬರೆದಿರುವೆ. ನಾಲ್ಕು ಜನರ ವಿರುದ್ದ ಗೋಲಿಬಾರ ಮಾಡಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಸತ್ಯ.
ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ನವೀನನನ್ನ ತಕ್ಷಣ
ಬಂಧನ ಮಾಡಿದ್ರೆ ಬೆಂಕಿ ಹಚ್ಚುತ್ತಿರಲಿಲ್ಲ. ಬೆಂಕಿ ಹಚ್ಚುವುದು ಕಾನೂನುಬಾಹಿರ. ನಾನು ಸಹ ಬೆಂಕಿ ಹಾಕಿರುವುದನ್ನ ಖಂಡಿಸುತ್ತೇನೆ. ಸಿಎಂ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ. ಅವರು ಯಾರನ್ನಾದ್ರು ಮಾಡಿಕೊಳ್ಳಲಿ. ಸಿಎಂ ಮತ್ತು ಕುಮಾರಸ್ವಾಮಿ ಏನು ಮಾತನಾಡಿಕೊಂಡಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಜೆಡಿಎಸ್ ನವರಿಗೆ ಸ್ಪಷ್ಟವಾದ ನಿಲುವಿಲ್ಲ. ಅವರು ಯಾವಾಗ ಬೇಕೋ ಅವಾಗ ಯಾರನ್ನಾದ್ರೂ ತಬ್ಬಿಕೊಳ್ಳತಾರೆ. ಸಧ್ಯ ರಾಜ್ಯವಂತೂ ದಿವಾಳಿ ಆಗಿಹೋಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ರು.