ಕೂಗು ನಿಮ್ಮದು ಧ್ವನಿ ನಮ್ಮದು

ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ಬೆಳಗಾವಿ ಜಿಲ್ಲಾಡಳಿತವೇ ಬಗೆಹರಿಸಲಿ: ಸತೀಶ್ ಜಾರಕಿಹೊಳಿ‌

ಧಾರವಾಡ: ಬೆಳಗಾವಿಯ ಪೀರನವಾಡಿ ಗ್ರಾಮದ ಶೂರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿವಾದ ವಿಚಾರವಾಗಿ ಮಾಜಿ ಸಚಿವ, ಶಾಸಕ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಈ ಸಮಸ್ಯೆಯನ್ನು ಬೆಳಗಾವಿ ಜಿಲ್ಲಾಡಳಿತವೇ ಬಗೆಹರಿಸಬೇಕು.

ಸತೀಶ್ ಜಾರಕಿಹೊಳಿ. ಕೆಪಿಸಿಸಿ ಕಾರ್ಯಾಧ್ಯಕ್ಷ

ಈ ವಿಚಾರದಲ್ಲಿ ಅವರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ಯಾಕಂದೆರೆ ಇದು ಎರಡು ಸಮುದಾಯದ ಮಧ್ಯೆ ಇರುವ ಸಮಸ್ಯೆಯಾಗಿದ್ದು, ಸ್ಥಳೀಯವಾಗಿಯೇ ಇದನ್ನು ಬಗೆಹರಿಸಬೇಕು ಎಂದು ನಾನು ನಿನ್ನೆಯೇ ಹೇಳಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರು, ಬೆಳಗಾವಿಯ ಎಲ್ಲ ಶಾಸಕರು, ಡಿಸಿ ಸೇರಿ ಈ ಸಮಸ್ಯೆ ಬಗೆಹರಿಸಬೇಕು. ಎಲ್ಲರೂ ಸೇರಿ ಸಂಧಾನ ಮಾಡಿದರೆ ಒಳ್ಳೆಯದು. ಎಲ್ಲರನ್ನು ಕರೆದು ಸಂಧಾನ ಮಾಡಿದರೆ ಸಮಸ್ಯೆ ಮುಗಿಯುತ್ತೆ. ಹೀಗಾಗಿ ಜಿಲ್ಲಾಡಳಿತ ಎರಡೂ ಸಮುದಾಯಗಳ ಮುಖಂಡರು ಹಾಗೂ ಎಲ್ಲ ಶಾಸಕರನ್ನು ಕರೆದು ಮಾತನಾಡುವಂತೆ ಸತೀಶ್ ಜಾರಕಿಹೊಳಿ ಆಗ್ರಹ ಮಾಡಿದ್ದಾರೆ.

error: Content is protected !!