ಕೂಗು ನಿಮ್ಮದು ಧ್ವನಿ ನಮ್ಮದು

ವಿಜಯಪುರ: ನೆರೆ ಸಂತ್ರಸ್ತರ ಜೊತೆ ರಾತ್ರಿ ವಾಸ್ತವ್ಯ ಮಾಡಿ ಆತ್ಮಸ್ಥೈರ್ಯ ತುಂಬಿದ ಶಾಸಕ ನಡಹಳ್ಳಿ

ಭೀಕರ ಪ್ರವಾಹದಿಂದಾಗಿ ಉತ್ತರ‌ ಕರ್ನಾಟಕದ ಜನ್ರು ಮನೆ ಮಠಗಳನ್ನು ಕಳೆದುಕೊಂಡು ಸಂತ್ರಸ್ಥರಾಗಿ, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿದ್ದಾರೆ. ಇವರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದಾರೆ. ಕಳೆದ ರಾತ್ರಿ ತಂಗಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಸಂತ್ರಸ್ಥರ ಕೇಂದ್ರದಲ್ಲಿ ವಾಸ್ತವ್ಯ ಮಾಡದ್ದಾರೆ. ಕುಂಚಗನೂರು, ಕಮಲದಿನ್ನಿ, ತಂಗಡಗಿ ಗ್ರಾಮಸ್ಥರಿರುವ ಸಂತ್ರಸ್ಥರ ಕೇಂದ್ರ ದಲ್ಲಿ ವಾಸ್ತವ್ಯ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ತೆರೆದಿರುವ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ ಮೊದಲ ಶಾಸಕರೆಂಬ ಹೆಗ್ಗಳಿಕೆ. ಇದಕ್ಕೂ ಮೊದಲು ಸಂತ್ರಸ್ಥರೊಂದಿಗೆ ಸ್ವಾತಂತ್ರ್ಯ ದಿನೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಿದ್ರು. ಅಲ್ಲದೆ ರಕ್ಷಾಬಂಧನ ಕಾರ್ಯಕ್ರಮದಲ್ಲೂ ಶಾಸಕ ನಡಹಳ್ಳಿ ಭಾಗಿಯಾಗಿದ್ರು. ಸಂತ್ರಸ್ಥರ ಜೊತೆಗೆ ನಾನಿದ್ದೇನೆ ಎಂದು ಅವರಿಗೆ ಧೈರ್ಯ ತುಂಬಿದ್ರು.
error: Content is protected !!