ಬೆಳಗಾವಿ: ಮಹಾಮಾರಿ ಕಿಲ್ಲರ್ ಕೊರೋನಾ ಎಂಬ ಪೆಡಂಭೂತ ಇಡಿ ಜಗತ್ತನ್ನೇ ತಲ್ಲಣಗೊಳಿಸಿದೆ. ಚೀನಾ, ಅಮೇರಿಕಾ, ಇಟಲಿ ಸೇರಿದಂತೆ ಬಹುತೇಕ ಮುಂದುವರಿದ ರಾಷ್ಟ್ರಗಳಲ್ಲಿ ಮರಣ ಮೃದಂಗವನ್ನ ಭಾರಿಸುತ್ತಿರೋ ಈ ಮಹಾಮಾರಿ ಭಾರತಕ್ಕೂ ಕಾಲಿಟ್ಟಿದೆ. ಇಲ್ಲಿಯೂ ತನ್ನ ಕಬಂಧ ಬಾಹುಗಳನ್ನ ಚಾಚಲು ಶುರು ಮಾಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುಂಜಾಗೃತೆಗಳನ್ನ ತೆಗೆದುಕೊಂಡಿದ್ದು ಮಹಾಮಾರಿಯಿಂದ ದೇಶವನ್ನ ರಕ್ಷಿಸಿಕೊಳ್ಳಲು ಇದೀಗ ಪ್ರಧಾನಿ ನರೇಂದ್ರ ಮೋದಿ ೨೧ ದಿನಗಳ ಲಾಕ್‌ಡೌನ್‌ಗೆ ಕರೆ ನೀಡಿದ್ದಾರೆ. ಈ ೨೧ ದಿನಗಳ ಲಾಕ್‌ಡೌನ್ ಒಂದು ಕಡೆಯಾದ್ರೆ ಇದೇ ಲಾಕ್‌ಡೌನ್ ನಿಂದ ಭಿಕ್ಷುಕರು ಸೇರಿದಂತೆ ಸಾವಿರಾರು ಕುಟುಂಬಗಳು ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುತ್ತಿವೆ. ತುತ್ತು ಅನ್ನಕ್ಕೂ ಪರದಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಇಂಥವರ ನೆರವಿಗೆ ಬಂದಿದ್ದು, ಬೆಳಗಾವಿಯ ಡಾ.ಪ್ರವೀಣ ಹಿರೇಮಠ್. ಹೌದು.. ಕೈಯಲ್ಲಿ ಮೈಕ್ ಹಿಡಿದು ಎಲ್ಲೆಂದರಲ್ಲಿ ಸುತ್ತಾಡಿ ಕಿಲ್ಲರ್ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತ, ಮಹಾಮಾರಿ ಕೊರೋನಾ ದಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನ ವಿವರಿಸುತ್ತಿರೊ ಬೆಳಗಾವಿಯ ಡಾ.ಪ್ರವೀಣ್ ಹಿರೇಮಠ್, ಇಂತಹ ತುರ್ತು ಪರಿಸ್ಥಿತಿಯಲ್ಲಿ ಭಿಕ್ಷುಕರು ಸೇರಿದಂತೆ ಗುಡಿಸಲು ವಾಸಿಗಳ ನೇರವಿಗೆ ಬಂದಿದ್ದಾರೆ. ಯಾವುದೇ ಎನ್‌ಜಿಓ ಇಲ್ಲದೇ.. ಯಾವುದೇ ಪ್ರತಿಫಲ ಅಪೇಕ್ಷಿಸದೇ ಸಮಾಜ ಸೇವೆ ಮಾಡುವ ತುಡಿತದಿಂದ ಬಂದಿರೋ ಡಾ.ಪ್ರವೀಣ್ ಹಿರೇಮಠ್, ಬೆಳಗಾವಿಯ ಬಹುತೇಕ ಕಡೆಗೆ ತೆರಳಿ ತಮ್ಮ ಉದಾರತೆ ಮೆರೆದಿದ್ದಾರೆ. ಇನ್ನು ಬೆಳಗಾವಿಯ ಕಣಬರ್ಗಿ ಬಳಿ ಇರುವ ಗುಡಿಸಲು ವಾಸಿಗಳಿಗೆ ಸಾಮಾಜೀಕ ಅಂತರದ ಬಗ್ಗೆ ತಿಳಿ ಹೇಳಿ, ಅವರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದ ಡಾ.ಪ್ರವೀಣ ಹಿರೇಮಠ್, ಅವರೆಲ್ಲರಿಗೂ ಮಾಸ್ಕ್ ನೀಡಿದ್ದಾರೆ. ಅಲ್ಲದೇ ಕೊರೋನಾ ವೈರಸ್ ಬಗ್ಗೆ ತಿಳುವಳಿಕೆ ಮೂಡಿಸಿ ಅದರಿಂದ ತೆಗೆದುಕೊಳ್ಳಬೇಕಾದ ಮುಂಜಾಗೃತೆಗಳ ಬಗ್ಗೆಯೂ ವಿವರಿಸಿದ್ದಾರೆ. ಇನ್ನು ಮಹಾಮಾರಿಯ ಬಗ್ಗೆ ಭಿಕ್ಷುಕರು ಹಾಗೂ ಗುಡಿಸಲು ವಾಸಿಗಳಿಗೆ ತಿಳಿ ಹೇಳಿದ ಡಾ.ಪ್ರವೀಣ್ ಹಿರೇಮಠ್, ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅವರ ತುತ್ತಿನ ಚೀಲದ ಬಗ್ಗೆಯೂ ವಿಚಾರಿಸಿದ್ದಾರೆ. ಈ ಲಾಕ್‌ಡೌನ್ ತುತ್ತಿನ ಚೀಲ ಹೊರೆಯೂವುದಕ್ಕು ಕಷ್ಟವಾಗಿದೆ ಅನ್ನೊ ವಿಚಾರ ತಿಳಿಯುತ್ತಿದ್ದಂತೆ ಮಾನವೀಯತೆ ಮೆರೆದು, ಅಲ್ಲಿನ ಕುಟುಂಬಗಳಿಗೆ ತಮ್ಮ ಕೈಲಾದಷ್ಟು ಅಕ್ಕಿ, ಬೆಳೆ, ತರಕಾರಿ, ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳನ್ನ ನೀಡಿದ್ದಾರೆ. ಮನೆಯಲ್ಲಿ ಟಿವಿ ಇರುವಂತವರಿಗೆ ಕೊರೊನಾ ವೈರಸ್ ಕುರಿತು ಜಾಗೃತಿ ಇರುತ್ತದೆ. ಆದ್ರೆ ಸ್ಲಂ ಏರಿಯಾದಲ್ಲಿ ಜೀವಿಸುವ ಜನರಿಗೆ ಕೊರೊನಾ ಅಂದ್ರೆ ಏನು ಅಂತಾನೆ ಗೊತ್ತಿಲ್ಲ. ಈ ಕಿಲ್ಲರ್ ಕೊರೊನಾ ವೈರಸ್ ಕುರಿತು ಯಾವುದೇ ಪ್ರಾಥಮಿಕ ಮಾಹಿತಿಯಿಲ್ಲ. ಹೀಗಾಗಿ ಇವರು ಎಂದಿನಂತೆ ಮಾಮೂಲಾಗಿ ತಿರುಗಾಡುತ್ತಿದ್ದಾರೆ. ಆದ್ದರಿಂದ ಅವರ ನೆರವಿಗೆ ಬಂದಿರುವ ಡಾ.ಪ್ರವೀಣ್ ಹಿರೇಮಠ್, ಅಂತವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮತ್ತಷ್ಟು ಹೃದಯವಂತರು ಇಂತಹ ನಿವಾಸಿಗಳ ನೆರವಿಗೆ ಬರಲಿ ಅನ್ನೊ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಮಾಡುವ ಕೆಲಸವನ್ನು ಸಾಮಾನ್ಯ ನಾಗರಿಕನಾಗಿ ಡಾ.ಪ್ರವೀಣ್ ಹಿರೇಮಠ್ ಮಾಡುತ್ತಿರುವುದು ಶ್ಲಾಘನಿಯ. ಇವರಂತೆ ಎಲ್ಲಾ ಸಂಘ ಸಂಸ್ಥೆಗಳು, ಉಳ್ಳವರು ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆಯುವ ಕೆಲಸ ಮಾಡಿದ್ರೆ ತುತ್ತು ಅನ್ನಕ್ಕೆ ಪರದಾಡುತ್ತಿರೋ ಅದೆಷ್ಟೋ ಕುಟುಂಬಗಳು ಕಾಲ್‌ಡೌನ್ ಮುಗಿಯುವ ವರೆಗೆ ನೆಮ್ಮದಿಯ ನಿಟ್ಟುಸಿರು ಬಿಡಲಿವೆ.
ಸುಭಾನಿ ಹುಕ್ಕೇರಿ. ನ್ಯೂಸ್೯೦ ಕರ್ನಾಟಕ, ಬೆಳಗಾವಿ.